ಸಮಾಜವನ್ನು ಮುನ್ನಡೆಸುವಲ್ಲಿ ಖಾಝಿಗಳು ಪ್ರಮುಖ ಪಾತ್ರ ವಹಿಸಬೇಕು: ಎ.ಪಿ. ಉಸ್ತಾದ್

ಮಂಗಳೂರು: ಖಾಝಿ ಅಂದರೆ ಕೇವಲ ಚಂದ್ರದರ್ಶನ ಅಥವಾ ನಿಕಾಹ್ ನಿರ್ವಹಿಸುವ ವ್ಯಕ್ತಿಯಲ್ಲ. ಸಮಾಜದ ಪ್ರತಿಯೊಂದು ವಿಷಯದಲ್ಲೂ ಖಾಝಿಗೆ ಮುಖ್ಯವಾದ ಜವಾಬ್ದಾರಿ ಇದೆ. ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಸಮಾಜವನ್ನು ಮುನ್ನಡೆಸುವಲ್ಲಿ ಖಾಝಿಗಳು ಪ್ರಮುಖ ಪಾತ್ರ ವಹಿಸಬೇಕು ಎಂದು ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಹೇಳಿದರು.
ನಗರದ ಪಂಪ್‌ವೆಲ್‌ನ ತಖ್ವಾ ಮಸೀದಿಯಲ್ಲಿ ಶನಿವಾರ ನಡೆದ ದ.ಕ., ಕೊಡಗು, ಶಿವಮೊಗ್ಗ ಹಾಗೂ ಕಾಸರಗೋಡು ಸಂಯುಕ್ತ ಜಮಾಅತ್‌ಗಳ ಸಭೆ ಹಾಗೂ ಮೊಹಲ್ಲಾ ವ್ಯವಸ್ಥೆಯ ಮೂಲಕ ಸಮುದಾಯದ ಸಬಲೀಕರಣ ಯೋಜನೆಗೆ ಸಂಬಂಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಬ್ದುಲ್ ಹಕೀಮ್ ಅಝ್ಹರಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಕೇರಳ ಎಸೆಸ್ಸೆಫ್ ಅಧ್ಯಕ್ಷ ಸಯ್ಯಿದ್ ಮುನೀರುಲ್ ಅಹ್ದಲ್ ದುಆಗೈದರು. ಝೈನಿ ಕಾಮಿಲ್ ಸಖಾಫಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಪಂಪ್‌ವೆಲ್ ತಖ್ವಾ ಮಸೀದಿಯ ಪದಾಧಿಕಾರಿಗಳು ಹಾಗೂ ವಿವಿಧ ಜಿಲ್ಲೆಗಳ ಸಂಯುಕ್ತ ಜಮಾಅತ್‌ಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
Next Story





