ಮಹಿಳೆ ನಾಪತ್ತೆ

ಮಂಗಳೂರು, ಜೂ.23: ನಗರದ ಪಣಂಬೂರು ಕೂರಿಕಟ್ಟ ಗ್ರಾಮದ ಕೋಸ್ಟ್‌ಗಾರ್ಡ್ ಆಫೀಸ್ ಹತ್ತಿರ ಬಾಡಿಗೆ ಮನೆಯಲ್ಲಿ ವಾಸವಿದ್ದ ಲಕ್ಷ್ಮೀಬಾಯಿ ಪರತಗೌಡ (49) ಎಂಬವರು ಕೂಲಿಕೆಲಸಕ್ಕೆಂದು ಊರ್ವಸ್ಟೋರ್ ತೆರಳಿದವರು ಮನೆಗೆ ವಾಪಸ್ ಬಾರದೆ ಕಾಣೆಯಾಗಿರುವ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಪಣಂಬೂರು ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾ ಪ್ರಕಟಣೆ ತಿಳಿಸಿದೆ.
Next Story





