ಸುಳ್ಯ: ಬಿಜೆಪಿ ವತಿಯಿಂದ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ

ಸುಳ್ಯ: ರಾಜ್ಯದ ಕಾಂಗ್ರೆಸ್ ಸರಕಾರ ಜನ ವಿರೋಧಿ ನೀತಿಯನ್ನು ಅನುಸರಿಸುತಿದೆ ಎಂದು ಆರೋಪಿಸಿ ಬಿಜೆಪಿ ಮಂಡಲ ಸಮಿತಿ ವತಿಯಿಂದ ಸೋಮವಾರ ಸುಳ್ಯ ನಗರ ಪಂಚಾಯಿತಿ ಹಾಗೂ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸುಳ್ಯ ನಗರ ಪಂಚಾಯತ್ ಮುಂಭಾಗದಲ್ಲಿ ನಡೆದ ಪ್ರತಿಭಟನೆಯನ್ನು ನಗರ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಉದ್ಘಾಟಿಸಿ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಮೇಲೆ ಜನರು ಹಲವು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಹಲವು ಯೋಜನೆಗಳಿಂದ ಸೌಲಭ್ಯಗಳಿಂದ ಜನರು ವಂಚಿತರಾಗುತ್ತಿದ್ದಾರೆ, ನಗರ ಪಂಚಾಯಿತಿ ಅಭಿವೃದ್ಧಿಗೆ ಅನುದಾನ ಬರ್ತಾ ಇಲ್ಲ, ಅಧಿಕಾರಿ, ಸಿಬ್ಬಂದಿಗಳ ನೇಮಕ ಆಗದೆ ಜನರು ಬವಣೆ ಪಡುವ ಸ್ಥಿತಿ ನಿರ್ಮಾಣ ಆಗಿದೆ ಎಂದು ಹೇಳಿದರು.
ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ ಮಾತನಾಡಿ ಎರಡೂವರೆ ವರ್ಷದ ಕಾಂಗ್ರೆಸ್ ಆಡಳಿತ ವೈಖರಿಯಿಂದ ಜನರು ಸಂಪೂರ್ಣ ಬೇಷತ್ತಿದ್ದಾರೆ. ಗ್ಯಾರಂಟಿಯ ವಿಷಯ ದಲ್ಲಿ ಮಾತ್ರ ಆಡಳಿತ ನಡೆಯುತಿದೆ, ಆದರೆ ಗ್ಯಾರಂಟಿ ಕೂಡ ಜನರಿಗೆ ಸರಿಯಾಗಿ ಸಿಗ್ತಾ ಇಲ್ಲಾ. ಅಭಿವೃದ್ಧಿಗೆ ಅನುದಾನ ಬಾರದ ಕಾರಣ ಅಭಿವೃದ್ಧಿ ಮಾಡುವ ಅವಕಾಶವೇ ಇಲ್ಲದಂತಾಗಿದೆ. ಅಕ್ರಮ ಸಕ್ರಮ, 94 ಸಿ ಮಂಜೂರಾಗುತ್ತಾ ಇಲ್ಲಾ, ಪೆÇೀಡಿ ಮುಕ್ತ ಮಾಡುವುದಾಗಿ ಹೇಳಿ ಒಂದು ಗ್ರಾಮದಲ್ಲಿ ಕೂಡ ಸರ್ವೆ ಆಗ್ತಾ ಇಲ್ಲಾ. ಜನ ಸಾಮಾನ್ಯರಿಗೆ ಯಾವುದೇ ಪ್ರಯೋಜನ ಇಲ್ಲದಂತಾಗಿದೆ ಎಂದು ಹೇಳಿದರು.
ನಗರ ಪಂಚಾಯತ್ ಉಪಾಧ್ಯಕ್ಷ ಬುದ್ಧ ನಾಯ್ಕ್, ಬಿಜೆಪಿ ನಗರ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಎ.ಟಿ. ಮಾತನಾಡಿದರು. ನಗರ ಪಂಚಾಯಿತಿ ಸದಸ್ಯರಾದ ಬಾಲಕೃಷ್ಣ ರೈ, ಸುಧಾಕರ ಕುರುಂಜಿಗುಡ್ಡೆ, ಕಿಶೋರಿ ಶೇಠ್, ಶೀಲಾ ಅರುಣ ಕುರುಂಜಿ, ಶಿಲ್ಪಾ ಸುದೇವ್, ಸುಶೀಲಾ ಜಿನ್ನಪ್ಪ, ಪ್ರಮುಖರಾದ ಸುನಿಲ್ ಕೇರ್ಪಳ, ಕಿರಣ್ ಕುರುಂಜಿ, ದಯಾನಂದ ಕೇರ್ಪಳ, ನವೀನ್ ಕುದ್ಪಾಜೆ, ಕೇಶವ ಮಾಸ್ತರ್ ಹೊಸಗದ್ದೆ, ಅವಿನಾಶ್ ಕುರುಂಜಿ, ಶಿವನಾಥ ರಾವ್, ಚಂದ್ರಶೇಖರ ಕೇರ್ಪಳ, ಶಿವರಾಮ ಕೇರ್ಪಳ,ದಾಮೋದರ ಮಂಚಿ ದಿನೇಶ್ ದುಗ್ಗಲಡ್ಕ, ದೇವರಾಜ್ ಕುದ್ಪಾಜೆ, ಪ್ರದೀಪ್ ಬೂಡು,ಪ್ರಶಾಂತ್ ಕಾಯರ್ತೋಡಿ, ರಂಜಿತ್ ಕುಮಾರ್, ಸೋಮನಾಥ ಪೂಜಾರಿ, ಶ್ವೇತಾ, ಸುಲೋಚನ, ಮತ್ತಿತರರು ಭಾಗವಹಿಸಿದ್ದರು.ಬಿಜೆಪಿ ನಗರ ಮಹಾ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಎಸ್.ಎಂ.ನಾರಾಯಣ ಶಾಂತಿನಗರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬೂಡು ರಾಧಾಕೃಷ್ಣ ರೈ ವಂದಿಸಿದರು.
ಮುರುಳ್ಯ ಗ್ರಾ.ಪಂ. ಕಚೇರಿ ಎದುರು ಬಿಜೆಪಿ ಪ್ರತಿಭಟನೆ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಜನರು ಒಂದಿಲ್ಲೊಂದು ಸಮಸ್ಯೆಯಲ್ಲಿದ್ದಾರೆ. ಅಭಿವೃದ್ದಿಗೆ ಯಾವುದೇ ಅನುದಾನ ಬರುತ್ತಿಲ್ಲ. ದುರಾಡಳಿತದಿಂದ ಸರಕಾರದ ಬೊಕ್ಕಸ ಖಾಲಿಯಾಗಿದೆ. ಜನರಿಗೆ 5 ರೂಪಾಯಿ ಕೊಟ್ಟು ತೆರಿಗೆ ರೂಪದಲ್ಲಿ ಹತ್ತು ರೂಪಯಿಯನ್ನು ಕಸಿದುಕೊಳ್ಳುತ್ತಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಸೋಮವಾರ ಮುರುಳ್ಯ ಗ್ರಾಮ ಪಂಚಾಯತಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ರಾಜ್ಯ ಸರಕಾರ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಜನವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಬಡವರ 94 ಸಿ ಹಕ್ಕು ಪತ್ರ ಗಳಿಗೆ 9/11 ನೀಡುವುದನ್ನು ತಡೆ ಮಾಡಿದೆ. ಬಡವರ ಅನಧಿಕೃತ ಕಟ್ಟಡಗಳಿಗೆ ನೀಡುತ್ತಿದ್ದ 11 ಬಿ ಖಾತೆಯನ್ನು ನೀಡದಂತೆ ಆದೇಶ ಹೊರಡಿಸಿದೆ. ಪ್ಲಾಟಿಂಗ್ ಆಗದೇ ಇರುವ ಜಮೀನಿನಲ್ಲಿ ಮನೆ ಕಟ್ಟಿ ಕೊಂಡವರಿಗೆ ಮನೆ ನಂಬ್ರ ನೀಡುವುದನ್ನು ತಡೆ ಹಿಡಿದಿದೆ. ಕುಟುಂಬಸ್ಥರು ವಾಸ್ತವವಿದ್ದುಕೊಂಡು ಮನೆ ನಂಬ್ರ ಇಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ತಡೆ ಹಿಡಿಯುವ ಮೂಲಕ ಸರಕಾರ ಬಡವರ ವಿರೋಧಿ ಆಗಿದೆ ಎಂದರು.
ಪ್ರತಿಭಟನೆಯಲ್ಲಿ ಗ್ರಾ.ಪಂ.ಅಧ್ಯಕ್ಷೆ ವನಿತಾ ಸುವರ್ಣ, ಉಪಾಧ್ಯಕ್ಷೆ ಜಾನಕಿ ಮುರುಳ್ಯ, ಸದಸ್ಯರುಗಳಾದ ಕರುಣಾಕರ ಗೌಡ ಹುದೇರಿ, ಮೋನಪ್ಪ ಗೌಡ, ಸುಂದರ ಗೌಡ, ಶೀಲಾವತಿ ಗೋಳ್ತಿಲ, ಪುಷ್ಪಲತಾ, ಬಿಜಿಪಿ ಮುಖಂಡ ವಸಂತ ನಡುಬೈಲ್ ಹಾಗೂ ಕಾರ್ಯಕರ್ತರು ಭಾಗವಹಿಸಿದರು.
ಅಜ್ಜಾವರ ಗ್ರಾ.ಪಂ. ಎದುರು ಬಿಜೆಪಿ ಪ್ರತಿಭಟನೆ
ಕಾಂಗ್ರೆಸ್ ಸರಕಾರದ ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಗ್ಯಾರಂಟಿ ಯೋಜನೆಯ ನೆಪ ಹೇಳಿ ಅಧಿಕಾರಕ್ಕೆ ಬಂದ ಸರಕಾರ ಜನರಿಗೆ ಯಾವುದೇ ಯೋಜನೆಗಳನ್ನು ನೀಡದೇ ಸುಲಿಗೆ ಮಾಡು ತ್ತಿದೆ. ಈ ಸರಕಾರವನ್ನು ಕಿತ್ತುಗೊಯುವ ತನಕ ಕಾರ್ಯಕರ್ತರು ವಿರಮಿಸಬಾರದು ಎಂದು ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರಕಾರ ಜನ ವಿರೋಧಿ ನೀತಿಯನ್ನು ಅನುಸರಿಸುತಿದೆ ಎಂದು ಆರೋಪಿಸಿ ಬಿಜೆಪಿ ಮಂಡಲ ಸಮಿತಿ ವತಿಯಿಂದ ಸೋಮವಾರ ಅಜ್ಜಾವರ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಸಮಿತಿ ಕೋಶಾಧಿಕಾರಿ ಸುಬೋದ್ ಶೆಟ್ಟಿ ಮೇನಾಲ, ತಾ.ಪಂ ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ , ಸುಳ್ಯ ಸಿಎ ಬ್ಯಾಂಕ್ ಅಧ್ಯಕ್ಷ ವಿಕ್ರಂ ಎ ವಿ ಅಡ್ಪಂಗಾಯ, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಸತ್ಯವತಿ ಬಸವನಪಾದೆ, ಜಯಂತಿ ಜನಾರ್ಧನ, ಪ್ರಮುಖರಾದ ರಾಜೇಶ್ ಶೆಟ್ಟಿ ಮೇನಾಲ , ಜಿಜಿ ನಾಯಕ್ , ಮನ್ಮಥ ಎ. ಎಸ್ , ಗುರುರಾಜ್ ಅಜ್ಜಾವರ , ಗಿರಿಧರ ನಾರಾಲು, ಲೋಕೇಶ್ ಅಡ್ಡಂತ್ತಡ್ಕ, ಹರಿಪ್ರಸಾದ್ ಸುಲಾಯ, ಪ್ರಬೋದ್ ಶೆಟ್ಟಿ ಮೇನಾಲ, ಕಮಲಾಕ್ಷ ರೈ ಬಾಡೇಲು, ಹರ್ಷಿತ್, ಹರಿಣಿ ಬೇಲ್ಯ, ಕಿಟ್ಟಣ್ಣ ರೈ ಮೇನಾಲ, ನಯನ್ ರೈ ಮೇನಾಲ , ಕಾರ್ತಿಕ್ ರಮೇಶ್ ದೊಡ್ಡೇರಿ, ರಮೇಶ್ ಮೇದಿನಡ್ಕ , ವಿನಯ ಕರ್ಲಪ್ಪಾಡಿ , ದಯಾಳ್ ಮೇದಿನಡ್ಕ, ವಸಂತಿ ಕರ್ಲಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.
ಅರಂತೋಡುನಲ್ಲಿ ಬಿಜೆಪಿ ಪ್ರತಿಭಟನೆ
ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಅರೋಪಿಸಿ ಸೋಮವಾರ ಅರಂತೋಡು ಗ್ರಾ.ಪಂ. ಮುಂಭಾಗ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು.
ಈ ಸಂದರ್ಭ ಅರಂತೋಡು ತೊಡಿಕಾನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ , ಅರಂತೋಡು ಗ್ರಾ.ಪಂ. ಅಧ್ಯಕ್ಷ ಕೇಶವ ಅಡ್ತಲೆ, ಪ್ರಮುಖರಾದ ಶಿವಾನಂದ ಕುಕ್ಕುಂಬಳ, ಸತೀಶ್ ನಾಯ್ಕ್ , ರೋಹಿತ್ ಕಲ್ಲುಗದ್ದೆ, ಭಾರತೀ ಪುರುಷೋತಮ, ಪುಷ್ಪಾ ಮೇದಪ್ಪ, ಚಂದ್ರಶೇಖರ ಆಚಾರ್ಯ, ಕಿಶೋರ್ ಉಳುವಾರು, ಸೋಮಶೇಖರ ಪೈಕ , ದಯಾನಂದ ಕುರುಂಜಿ, ಪಂಚಾಯತ್ ಸದಸ್ಯರು, ಸೊಸೈಟಿ ನಿರ್ದೇಶಕರು, ಕಾರ್ಯಕರ್ತರು ಹಾಜರಿದ್ದರು.
ಐವರ್ನಾಡು ಗ್ರಾ.ಪಂ.ಎದುರು ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿಯಿಂದ ಐವರ್ನಾಡು ಗ್ರಾ.ಪಂ. ಎದುರು ಸೋಮವಾರ ಪ್ರತಿಭಟನೆ ನಡೆಯಿತು.
ಬಿಜೆಪಿ ಮಹಾಶಕ್ತಿ ಕೇಂದ್ರದ ಕಿಶನ್ ಜಬಳೆ, ಮೋಹನ ಬೋಳುಗುಡ್ಡೆ, ಸಹಕಾರಿ ಸಂಘದ ನಿರ್ದೇಶಕ ಶ್ರೀನಿವಾಸ ಮಡ್ತಿಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನವೀನ್ ಕುಮಾರ್ ಸಾರಕರೆ ಅವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಬಳಿಕ ಗ್ರಾಮ ಪಂಚಾಯಿತಿ ಪಿಡಿಒ ಮುಖಾಂತರ ಮುಖ್ಯಮಂತ್ರಿ ,ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗಣೇಶ ಕೊಚ್ಚಿ, ದೇವಿದಾಸ ಕತ್ಲಡ್ಕ , ಸರಸ್ವತಿ ಕೈವಲ್ತಡ್ಕ, ಜಗದೀಶ ಕೋಲ್ಚಾರ್, ಬಾಲಚಂದ್ರ ಪಲ್ಲತ್ತಡ್ಕ, ರೇವತಿ ಬೋಳುಗುಡ್ಡೆ, ಅರುಣ್ ಗುತ್ತಿಗಾರುಮೂಲೆ, ಚೇತನ್ ಬೋಳುಗುಡ್ಡೆ, ಜನಾರ್ಧನ ನನ್ಯಡ್ಕ, ಅನಿಲ್ ದೇರಾಜೆ, ರಕ್ಷಿತ್ ಸಾರಕೂಟೇಲು, ನಿಖಿಲ್ ಮಡ್ತಿಲ, ಗಣೇಶ ಬಜಂತಡ್ಕ, ರೇಣುಕಾಪ್ರಸಾದ್ ಚಾಕೋಟೆ, ಪ್ರಸಾದ್ ದೇವರಕಾನ, ಗಣೇಶ ದೇವರಕಾನ, ಸತ್ಯನಾರಾಯಣ ಅಚ್ರ ಪ್ಪಾಡಿ, ಭವಾನಿಶಂಕರ ಪೂಜಾರಿಮನೆ, ಗ್ರಾ.ಪಂ.ಸದಸ್ಯೆ ನಳಿನಿ ಕೋಡ್ತೀಲು ಹಾಗೂ ಬಿಜೆಪಿ ಶಕ್ತಿ ಕೇಂದ್ರದ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು. ಐವರ್ನಾಡು ಬಿಜೆಪಿ ಶಕ್ತಿ ಕೇಂದ್ರದ ಸಂಚಾಲಕ ನಂದಕುಮಾರ್ ಬಾರೆತ್ತಡ್ಕ ವಂದಿಸಿದರು.
ದೇವಚಳ್ಳ: ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ
ರಾಜ್ಯ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ದೇವಚಳ್ಳ ಗ್ರಾಮ ಪಂಚಾಯಿತಿ ಕಚೇರಿಯ ಮುಂದೆ ಸೋಮವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಎ.ವಿ.ತೀರ್ಥರಾಮ, ಯುವ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ಶಕ್ತಿ ಕೇಂದ್ರದ ಅಧ್ಯಕ್ಷ ದಿವಾಕರ ಮುಂಡೋಡಿ ಮಾತನಾಡಿ ರಾಜ್ಯಸರಕಾರದ ನಡೆಗಳನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ಭವಾನಿಶಂಕರ ಮುಂಡೋಡಿ, ಪ್ರೇಮಲತಾ ಕೇರ, ಗುತ್ತಿಗಾರು ಸಹಕಾರ ಸಂಘದ ಮಾಜಿ ಉಪಾಧ್ಯಕ್ಷ ಕಿಶೋರ್ ಅಂಬೆಕಲ್ಲು, ಗುತ್ತಿಗಾರು ಪ್ರಾ.ಸಹಕಾರ ಸಂಘದ ನಿರ್ದೇಶಕ ಜನಾರ್ಧನ ನಾಯ್ಕ್ ಅಚ್ರಪ್ಪಾಡಿ, ದೇವ ಬೂತ್ ಸಮಿತಿ ಅಧ್ಯಕ್ಷ ಲಕ್ಷ್ಮೀಶ ಅಡ್ಡನಪಾರೆ, ಕಂದ್ರಪ್ಪಾಡಿ ಬೂತ್ ಸಮಿತಿ ಅಧ್ಯಕ್ಷ ಪದ್ಮನಾಭ ಮೀನಾಜೆ, ಕಾರ್ಯದರ್ಶಿ ಉದಯ ಮುಂಡೋಡಿ, ಶಕ್ತಿಕೇಂದ್ರದ ಸಹಪ್ರಮುಖ್ ಇಂದಿರೇಶ್ ಗುಡ್ಡೆಮನೆ, ಶಶಿಧರ ಬಾಳೆಗುಡ್ಡೆ, ಯೋಗೀಶ್ ದೇವ, ಸುಬ್ರಹ್ಮಣ್ಯ ಪಾರೆಪ್ಪಾಡಿ, ಗಣೇಶ್ ಕೇರ, ಶಿವಪ್ರಕಾಶ್ ಅಡ್ಡನಪಾರೆ, ತಾರಾನಾಥ ಅಡಿಗೈ, ಭಾಸ್ಕರ ಮೆದು, ದುರ್ಗೇಶ್ ಪಾರೆಪ್ಪಾಡಿ, ಪ್ರೀತಂ ಮುಂಡೋಡಿ ಮತ್ತಿತರರು ಉಪಸ್ಥಿತರಿದ್ದರು. ಶ್ರೀಕಾಂತ್ ಮಾವಿನಕಟ್ಟೆ ಸ್ವಾಗತಿಸಿ, ಉದಯ ಚಳ್ಳ ವಂದಿಸಿದರು.







