ಮನಪಾದಿಂದ ಬಿಜೈಯ ಸಿಕ್ಸ್ತ್ ಸೆನ್ಸ್ ಬ್ಯೂಟಿ ಪಾರ್ಲರ್ ವ್ಯಾಪಾರ ಪರವಾನಿಗೆ ರದ್ದು
► ಕಾನೂನುಬಾಹಿರ ಚಟುವಟಿಕೆ ಆರೋಪ
ಮಂಗಳೂರು, ಜೂ.24: ನಗರದ ಬಿಜೈಯ ಸಿಕ್ಸ್ತ್ ಸೆನ್ಸ್ ಬ್ಯೂಟಿ ಪಾರ್ಲರ್ ನಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದ ಬಳಿಕ ಉರ್ವ ಪೊಲೀಸರು ದಾಳಿ ನಡೆಸಿದ್ದಾರೆ.
ಬಿಜೈಯ ಪಿಂಟೋ ಛೇಂಬರ್ ನಲ್ಲಿರುವ ಈ ಸೆಲೂನ್ ನಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಇತ್ತು. ಅದರಂತೆ ದಾಳಿ ನಡೆಸಿ ಆರೋಪಿ ಉಡುಪಿ ಬ್ರಹ್ಮಾವರದ ಸುದರ್ಶನ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅದಲ್ಲದೆ ಈ ಬ್ಯೂಟಿಪಾರ್ಲರ್ ನ ವ್ಯಾಪಾರ ಪರವಾನಿಗೆಯನ್ನು ರದ್ದುಪಡಿಸಲು ಪೊಲೀಸ್ ಇಲಾಖೆಯು ಮಂಗಳೂರು ಮನಪಾ ಆಡಳಿತವನ್ನು ಕೋರಿತ್ತು. ಅದರಂತೆ ಮನಪಾ ಆಡಳಿತವು ಈ ಸೆಲೂನ್ ನ ವ್ಯಾಪಾರ ಪರವಾನಿಗೆಯನ್ನು ರದ್ದುಪಡಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Next Story





