ರಾಜ್ಯಾದ್ಯಂತ ಯುವ ಸಬಲೀಕರಣಕ್ಕಾಗಿ ಕಾಂಗ್ರೆಸ್ ಕಾರ್ಯಕ್ರಮ; ಮಂಜುನಾಥ ಗೌಡ

ಮಂಗಳೂರು, ಜೂ.24: ಯುವ ಜನರ ಉದ್ಯೋಗ, ಶಿಕ್ಷಣ ಹಾಗೂ ಬದುಕು ಕಟ್ಟಿಕೊಳ್ಳಲು ಕಾಂಗ್ರೆಸ್ ರಾಜ್ಯಾದ್ಯಂತ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಪಕ್ಷ ಸಂಘಟನೆಯೊಂದಿಗೆ ಯುವ ಸಬಲೀಕರಣದ ಯೋಜನೆಯ ನೀಲಿ ನಕ್ಷೆಯನ್ನು ಯುವ ಕಾಂಗ್ರೆಸ್ ಹೊಂದಿದೆ. ಅದನ್ನು ಸಾಕಾರ ಗೊಳಿಸಲಿದೆ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಗೌಡ ಹೇಳಿದರು.
ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ರವಿವಾರ ನಡೆದ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯನ್ನು ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ನಿಗಮ್ ಭಂಡಾರಿ ಉದ್ಘಾಟಿಸಿದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಮಾಜಿ ಸಚಿವ ರಮಾನಾಥ ರೈ, ಕಾಂಗ್ರೆಸ್ ಮುಖಂಡ ಪದ್ಮರಾಜ್ ಪೂಜಾರಿ, ರಾಜ್ಯ ಉಪಾಧ್ಯಕ್ಷ ಮಂಜುನಾಥ ಮಣಿಚೆಟ್ಟಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಯಾಣ್ ತೇಜಸ್, ರಾಜ್ಯ ಕಾರ್ಯದರ್ಶಿ ಅನಿಲ್ ಕುಮಾರ್ ಮಾತನಾಡಿದರು.
ರಾಜ್ಯ ಪದಾಧಿಕಾರಿಗಳಾದ ಸೋನಿಯ, ಸುರಯ್ಯ ಅಂಜುಮ್, ಅಭಿನಂದನ್ ಹರೀಶ್, ಶ್ರೀ ಪ್ರಸಾದ್, ಅಬ್ದುಲ್ ರವೂಫ್, ಪವನ್ ಸಾಲ್ಯಾನ್, ಕಾನೂನು ವಿಭಾಗ ಮುಖ್ಯಸ್ಥ ಶ್ರೀಧರ್, ಸಾಮಾಜಿಕ ಜಾಲತಾಣ ಸಂಚಾಲಕ ದೀಪಕ್ ಗೌಡ, ಜಿಲ್ಲಾ ಯುವ ಕಾಂಗ್ರೆಸ್ ಉಸ್ತುವಾರಿ ಕಿರಣ್ ಬುಡ್ಲೆಗುತ್ತು, ಸುಹೈಲ್ ಕಂದಕ್, ಜಿಲ್ಲಾ ಉಪಾಧ್ಯಕ್ಷರಾದ ಮುಹಮ್ಮದ್ ಬಶೀರ್, ದೀಕ್ಷಿತ್ ಅತ್ತಾವರ, ಸುನಿತ್ ಡೇಸಾ, ವಿನೋಲ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು.