ಶೈಖುನಾ ಶಂಸುಲ್ ಉಲಮಾರ ಸ್ಮರಣಾರ್ಥ ಆ್ಯಂಬುಲೆನ್ಸ್ ಕೊಡುಗೆ

ಮಂಗಳೂರು, ಜೂ.24: ಮೂಡಬಿದಿರೆ ಲಿಟ್ಲ್ ಸ್ಟಾರ್ಸ್ ಆಂಗ್ಲ ಮಾಧ್ಯಮ ಶಾಲೆಯ ಅಂಗ ಸಂಸ್ಥೆಯಾದ ಶೈಖುನಾ ಶಂಸುಲ್ ಉಲಮಾರ ಸ್ಮರಣಾರ್ಥ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಹಝ್ರತ್ ಸಯ್ಯಿದ್ ಸುಲೈಮಾನ್ ಬಾದುಶಾ ಖಾದ್ರಿ ಜಿಸ್ತಿಯಾ ಬಗ್ದಾದಿ ದೂದ್‌ನಾನಾ ದರ್ಗಾದ ದೂದ್‌ನಾನಾ ಮುಹಿಬ್ಬೀನ್ ಚಾರಿಟೇಬಲ್ ಟ್ರಸ್ಟಿಗೆ ಸಾರ್ವಜನಿಕರ ಸೇವೆಗಾಗಿ ಕೊಡುಗೆಯಾಗಿ ನೀಡಿದ ಎರಡು ಆ್ಯಂಬುಲೆನ್ಸ್‌ಗಳನ್ನು ಮೂಡುಬಿದಿರೆ ಮಾರುತಿ ಶೋರೂಂನಿಂದ ಸಯ್ಯಿದ್ ಜಲಾಲುದ್ದೀನ್ ತಂಳ್ ಅಲ್ ಬುಖಾರಿ ಅನಾವರಣಗೊಳಿಸಿದರು.
ಈ ಸಂದರ್ಭ ಕೆ.ಐ ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ, ಮುಹಮ್ಮದ್ ಶರೀಫ್ ದಾರಿಮಿ ಮೂಡುಬಿದಿರೆ, ಝಮೀರ್ ಮುಸ್ಲಿಯಾರ್ ಬಳಂಜ, ಸಾರಾ ಇಸ್ಮಾಯಿಲ್, ಹಮೀದ್ ಮಿಲನ್, ಲಿಟ್ಲ್ ಸ್ಟಾರ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಎರಡು ಆ್ಯಂಬುಲೆನ್ಸ್‌ಗಳಲ್ಲಿ ಒಂದನ್ನು ದೂದ್‌ನಾನಾ ಮುಹಿಬ್ಬೀನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೆಳ್ತಂಗಡಿ ಹಝ್ರತ್ ಅನ್ವರ್ ಮಸ್ತಾನ್ ದರ್ಗಾಕ್ಕೆ ನೀಡಲಾಗುತ್ತಿದೆ. ಇದನ್ನು ಜು.2ರಂದು ಲಕ್ಷ್ಮೇಶ್ವರ ದೂದ್‌ನಾನಾ ದರ್ಗಾದಲ್ಲಿ ನಡೆಯುವ ಮಜ್ಲಿಸುನ್ನೂರು ವಾರ್ಷಿಕ ಹಾಗೂ ಮಾದಕ ಮುಕ್ತ ಸಮಾಜ ಅಭಿಯಾನ ಕಾರ್ಯಕ್ರಮದಲ್ಲಿ ಸಯ್ಯಿದ್ ಝೈನುಲ್ ಆಬಿದೀನ್ ತಂಳ್ ದುಗ್ಗಲಡ್ಕ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಟ್ರಸ್ಟಿನ ಚೇರ್ಮನ್ ಝೈನುಲ್ ಆಬಿದೀನ್ ಲಕ್ಷ್ಮೇಶ್ವರ ತಿಳಿಸಿದ್ದಾರೆ.