ಯುವ ಸಂಘಗಳಿಗೆ ಕ್ರೀಡಾ ಕಿಟ್: ಅರ್ಜಿ ಆಹ್ವಾನ

ಮಂಗಳೂರು: ಗ್ರಾಮೀಣ ಯುವಜನತೆಯು ಆರೋಗ್ಯಕರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಹಾಯಕ ವಾಗುವ ವಾತಾವರಣವನ್ನು ಸೃಷ್ಟಿಸಲು 2025-26ನೇ ಸಾಲಿನ ಯುವ ಚೈತನ್ಯ ಯೋಜನೆಯಡಿ ರಾಜ್ಯದ ಆಯ್ದ ಯುವ ಸಂಘಗಳಿಗೆ ಕ್ರೀಡಾ ಸಾಮಾಗ್ರಿಗಳನ್ನು ಒದಗಿಸಲು ಯುವ ನೀತಿ ಅನುಷ್ಠಾನದಡಿ ಅನುದಾನ ನಿಗದಿಪಡಿಸಲಾಗಿದೆ.
ಜಿಲ್ಲೆಯಲ್ಲಿ ಸಕ್ರಿಯವಾಗಿರುವ 4 ಯುವ ಸಂಘ (ಗ್ರಾಮೀಣ ಪ್ರದೇಶದ ಶೇ.70ರಷ್ಟು ಹಾಗೂ ನಗರ ಪ್ರದೇಶದ ಶೇ.30ರಷ್ಟು) ಗಳನ್ನು ನಿಯಮಾನುಸಾರ ಆಯ್ಕೆ ಮಾಡಿ ಪಟ್ಟಿಯನ್ನು ಬೆಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರಿಗೆ ಕಳುಹಿಸಲಾಗುತ್ತದೆ.
ದ.ಕ.ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಹಾಗೂ ಕರ್ನಾಟಕ ರಾಜ್ಯ ಸಂಘ ಸಂಸ್ಥೆಗಳ ಕಾಯ್ದೆ 1960ರಡಿ ನೋಂದಣಿಗೊಂಡಿರುವ ಯುವಕ/ಯುವತಿ ಸಂಘಗಳು ಸೇವಾಸಿಂಧು ಪೋರ್ಟಲ್ ಮುಖಾಂತರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮಾನ್ಯತೆ ಪಡೆದಲ್ಲಿ ಅಂತಹ ಯುವಕ/ಯುವತಿ ಸಂಘಗಳನ್ನು ಯುವ ಚೈತನ್ಯ ಯೋಜನೆಗೆ ಪರಿಗಣಿಸಲಾಗುತ್ತದೆ. ಹಾಗಾಗಿ ಆಸಕ್ತ ಯುವಕ/ಯುವತಿ ಸಂಘಗಳು ಆನ್ ಲೈನ್ ಮೂಲಕ ಜು.25ರೊಳಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮಾನ್ಯತೆ ಪಡೆಯು ವಂತೆ ಸೂಚಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು, ಮಂಗಳಾ ಕ್ರೀಡಾಂಗಣ, ಮಂಗಳೂರು ಕಚೇರಿ ದೂ.ಸಂ:0824-2451264ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.