ಬೊಳ್ಳಾಯಿ : ಎಸ್‌ಬಿಎಸ್ ವಿದ್ಯಾರ್ಥಿ ಒಕ್ಕೂಟದ ಚುನಾವಣೆ

ಮಂಗಳೂರು: ಬದ್ರಿಯಾ ಜುಮಾ ಮಸೀದಿ ಬೊಳ್ಳಾಯಿ ಇದರ ಅಧೀನದಲ್ಲಿರುವ ಹಿದಾಯತುಲ್ ಇಸ್ಲಾಂ ಸೆಕೆಂಡರಿ ಮದ್ರಸದ ವಿದ್ಯಾರ್ಥಿಗಳ ಸುನ್ನೀ ಬಾಲ ಸಂಘ (ಎಸ್‌ಬಿಎಸ್)ದ ನೂತನ ಸಮಿತಿಗೆ ಚುನಾವಣೆ ಪ್ರಕ್ರಿಯೆಯು ಉತ್ತಮ ಸಮಾಜದ ಉದಾತ್ತ ಪ್ರಜೆಗಳಾಗೋಣ ಎಂಬ ಸಂದೇಶದೊಂದಿಗೆ ನಡೆಯಿತು.
ಮದ್ರಸದ ಪ್ರಾಂಶುಪಾಲ ಅಕ್ಬರ್ ಹಿಮಮಿ ಸಖಾಫಿ ಕುಪ್ಪೆಟ್ಟಿಯ ನೇತೃತ್ವದಲ್ಲಿ ಗ್ರ್ಯಾಂಡ್ ಅಸೆಂಬ್ಲಿ ನಡೆಸಿದ ನಂತರ ಚುನಾವಣಾ ಅಧಿಕಾರಿ ಹಾಫಿಲ್ ಇಸ್ಮಾಯಿಲ್ ಹನೀಫಿ ಕಂಚಿಲರ ನೇತೃತ್ವದಲ್ಲಿ ಸ್ಟಾಫ್ ಕೌನ್ಸಿಲ್‌ನ ಸಹಕಾರದೊಂದಿಗೆ ಬದ್ರಿಯಾ ಜುಮಾ ಮಸೀದಿಯ ಆಡಳಿತ ಸಮಿತಿಯ ಮಾರ್ಗದರ್ಶನದಲ್ಲಿ ಚುನಾವಣೆ ನಡೆಯಿತು.
ಮಾದ್ಯಮ, ಮಿಲಿಟರಿ ಝಡ್, ಹೆಲ್ಪ್‌ಡೆಸ್ಕ್, ವಿಶೇಷ ಮೆರುಗು ನೀಡಿತ್ತು. ಇಂತಹ ಚುನಾವಣೆಯು ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಸಂವಿಧಾನದ ಹಕ್ಕು ಚಲಾವಣೆಗೆ ಸ್ಫೂರ್ತಿಯಾಗಲಿದೆ. ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ನಾಂದಿಯಾಗಲಿದೆ ಎಂದು ಸ್ಥಳೀಯ ಖತೀಬ್, ಎಸ್‌ಜೆಎಂ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಕೆಎಚ್‌ಯು ಶಾಫಿ ಮದನಿ ಅಲ್ ಅಝ್ಹರಿ ಹೇಳಿದರು.