ಸಂತೋಷನಗರ: ಸ್ನೇಹಮಿಲನ ಕಾರ್ಯಕ್ರಮ

ಮಂಗಳೂರು: ಮುನ್ನೂರು ಗ್ರಾಮದ ಸಂತೋಷ ನಗರ ಯುವಕರ ತಂಡದ ವತಿಯಿಂದ ಸ್ನೇಹ ಸಮ್ಮಿಲನ - 2025 ಕಾರ್ಯಕ್ರಮವು ಶನಿವಾರ ತೊಕ್ಕೊಟ್ಟು ಸಮೀಪದ ಕಲ್ಲಾಪುನಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ನಡೆಯಿತು. ಊರಿನ ಯುವಕರು ವಿವಿಧ ಆಟೋಟ ಸ್ಪರ್ಧೆಗಳು, ಮನೋರಂಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದ ಸಂಚಾಲಕರಾದ ಸೈಫ್ ಕುತ್ತಾರ್, ಝಮೀರ್ ಅಹ್ಮದ್, ಮುನ್ನೂರು ಗ್ರಾಪಂ ಸದಸ್ಯ ಹಸೈನಾರ್, ಉದ್ಯಮಿಗಳಾದ ಇಕ್ಬಾಲ್, ಶಬೀರ್, ಶಾಫಿ, ಜಬ್ಬಾರ್, ಇಮ್ತಿಯಾಝ್ ಸ್ಟಿಕ್ಕರ್, ರಫೀಕ್, ಹಕೀಮ್, ಸಿದ್ದೀಕ್, ಮುನೀರ್, ಶೆಮೀಮ್, ಅಝೀಝ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಯೋಜಕರಾದ ಸಲಾಂ, ನಿಯಾಝ್, ರಿಜ್ವಾನ್, ಸಂಶುದ್ದೀನ್, ಸುಲ್ತಾನ್, ಇಸ್ಮಾಯಿಲ್, ನಝೀರ್, ಮೊಹಿನುದ್ದಿನ್, ನೌಶಾದ್, ಸಿಯಾಬ್, ರಿಜ್ಜು, ರಝಾಕ್, ಇಮ್ರಾನ್, ಅಫ್ರಿದ್, ಮುನ್ನ ಮತ್ತಿತರರು ಉಪಸ್ಥಿತರಿದ್ದರು.
Next Story