ಮಂಗಳೂರು: ಸಾಧಕರನ್ನು ಗೌರವಿಸಿದ ಸಿಪಿಐ ಪಕ್ಷ

ಮಂಗಳೂರು: ಭಾರತದ ಪ್ರಪ್ರಥಮ ರಾಜಕೀಯ ಪಕ್ಷವಾಗಿರುವ ಭಾರತ ಕಮ್ಯುನಿಸ್ಟ್ ಪಕ್ಷದ ನೂರರ ಸಂಭ್ರಮದ ಹಿನ್ನೆಲೆಯಲ್ಲಿ ರವಿವಾರ ನಗರದಲ್ಲಿ ಜರುಗಿದ ಮಂಗಳೂರು ತಾಲೂಕು ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ಅಲ್ಲದೆ ವಿದ್ಯಾರ್ಥಿಗಳ ಮುಂದಿನ ವ್ಯಾಸಂಗಕ್ಕೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.
ಸಮ್ಮೇಳನದ ವೇದಿಕೆಯಲ್ಲಿ ಸಿಪಿಐ ದ.ಕ ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ಬಿ. ಶೇಖರ್, ನಿಕಟಪೂರ್ವ ಕಾರ್ಯದರ್ಶಿ ವಿ. ಕುಕ್ಯಾನ್, ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಎಚ್.ವಿ. ರಾವ್, ಜಿಲ್ಲಾ ನಿಕಟಪೂರ್ವ ಕೋಶಾಧಿ ಕಾರಿ ಎ. ಪ್ರಭಾಕರ ರಾವ್, ಸಂಜೀವಿ ಹಳೆಯಂಗಡಿ, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ವಿ.ಎಸ್. ಬೇರಿಂಜ, ಸಿಪಿಐ ಮಂಗಳೂರು ಕಾರ್ಯದರ್ಶಿ ಕರುಣಾಕರ್ ಮಾರಿಪಲ್ಲ ಉಪಸ್ಥಿತರಿದ್ದರು.
Next Story