ದ.ಕ.ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದಿಂದ ವಿಶೆಷ ಜಾಥಾ

ಮಂಗಳೂರು: ದ.ಕ.ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ (ಎಸ್.ಕೆ.ಡಿ.ಸಿ ಮತ್ತು ಡಿ.ಎ) ವತಿಯಿಂದ ಮಾದಕ ವಸ್ತು ವಿರೋಧಿ ದಿನದ ಪ್ರಯುಕ್ತ ನಗರದ ವೆನ್ಲಾಕ್ ಆಸ್ಪತ್ರೆಯ ಬಳಿಯಿಂದ ಕ್ಲಾಕ್ ಟವರ್ ತನಕ ಗುರುವಾರ ವಿಶೇಷ ಜಾಥಾ ನಡೆಯಿತು.
ಮಂಗಳೂರು ಸಹಾಯಕ ಔಷಧ ನಿಯಂತ್ರಕ ಬಾಬು ಜಾಥವನ್ನು ಉದ್ಘಾಟಿಸಿ ಮಾತನಾಡಿದರು. ಸಂಘದ ಅಧ್ಯಕ್ಷ ಅರುಣ್ ಶೆಟ್ಟಿ, ಕಾರ್ಯದರ್ಶಿ ಎ.ಕೆ. ಜಮಾಲ್, ಉಪಾಧ್ಯಕ್ಷ ಅಮೃತ್ ಕಿರಣ್ ರೈ, ಜತೆ ಕಾರ್ಯ ದರ್ಶಿ ಶ್ರೀನಿವಾಸ್ ಭಟ್, ಖಜಾಂಚಿ ಚಂದ್ರಶೇಖರ್ ಭಟ್, ಪ್ರಮುಖರಾದ ಶರತ್ ಆಳ್ವ, ಪ್ರಶಾಂತ್ ಶೆಟ್ಟಿ, ಸುನಿಲ್ ನಾಯಕ್, ವಿನಯ ರೈ, ವಾಲ್ಟರ್ ಡಿಕುನ್ಹ, ಸುಧಾಕರ ಪೈ, ಸಿ.ಎಚ್. ಗಫೂರ್, ನವಿನ್ ಟಿ., ರೋಹಿತ್ ಕುಮಾರ್, ಆದರ್ಶ್, ವಾಸುದೇವ ಭಟ್, ಉದಯ ಕುಮಾರ್ ಉಪಸ್ಥಿತರಿದ್ದರು.
Next Story





