ಶನಿವಾರದಿಂದ ಮುಹರ್ರಮ್ ಪ್ರಾರಂಭ: ಶೈಖುನಾ ಖಾಝಿ ಮಾಣಿ ಉಸ್ತಾದ್

ಮಂಗಳೂರು: ದುಲ್ ಹಜ್ಜ್ 30 ಪೂರ್ತಿಗೊಳಿಸಿ (ಜೂ.28) ಶನಿವಾರದಿಂದ ಮುಹರ್ರಮ್ ಪ್ರಾರಂಭ ಎಂದು ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಶೈಖುನಾ ಮಾಣಿ ಉಸ್ತಾದ್ ಘೋಷಿಸಿದ್ದಾರೆ.
ಜುಲೈ 6 ಮತ್ತು 7 ರಂದು ಮುಹರ್ರಮ್ 9 ಮತ್ತು 10 ನೇ ದಿನವಾಗಿರುತ್ತದೆ. ಅಂದು ವೃತಾಚರಿಸುವುದು ಪ್ರತ್ಯೇಕ ಸುನ್ನತ್ ಇದೆ ಎಂದು ತಿಳಿಸಿರುವುದಾಗಿ ಬಿ.ಕೆ.ಅಬ್ದುರ್ರಹ್ಮಾನ್ ಮದನಿ ಮೂಳೂರು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜೂನ್ 26ರ ರಾತ್ರಿ ಚಂದ್ರದರ್ಶನವಾದ ಬಗ್ಗೆ ಮಾಹಿತಿ ಇಲ್ಲದ ಕಾರಣ ಮುಹರ್ರಮ್ ಒಂದು ಶನಿವಾರ ಆಗಿರುತ್ತದೆ ಎಂದು ಉಳ್ಳಾಲ ಖಾಝಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎಪಿ ಅಬೂಬಕ್ಕರ್ ಮುಸ್ಲಿಯಾರ್ ತಿಳಿಸಿದ್ದಾರೆ ಎಂದು ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಅವರು ಪ್ರಕಟನೆಯಲ್ಲಿ ಮಾಹಿತಿ ನೀಡಿದ್ದಾರೆ.
Next Story





