ದ.ಕ.ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ ಮುಸ್ಲಿಂ ಲೀಗ್ ನಿಯೋಗ

ಮಂಗಳೂರು: ದ.ಕ.ಜಿಲ್ಲೆಯ ನೂತನ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರನ್ನು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದ.ಕ.ಜಿಲ್ಲಾ ಸಮಿತಿಯ ನಿಯೋಗವು ಭೇಟಿ ಮಾಡಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿತು.
ರಾಜ್ಯದ ಸರಕಾರವು ಅಧಿಕಾರಕ್ಕೆ ಬಂದು ಎರಡು ವರ್ಷ ವರ್ಷಗಳಾಗಿವೆ. ಈವರೆಗೂ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಪಡಿತರ ಚೀಟಿ ದೊರಕಿಲ್ಲ. ಹಲವಾರು ಮಾನದಂಡಗಳಿಲ್ಲದೆ ಸರಳೀಕರಣ ನಿಯಮ ಗಳಿಂದ ಎಲ್ಲಾ ಕುಟುಂಬಗಳಿಗೆ ಅರ್ಜಿ ಸಲ್ಲಿಸಲು ಆದೇಶ ನೀಡಿ ಸಾರ್ವತ್ರಿಕವಾಗಿ ಚೀಟಿ ವಿತರಿಸುವಂತೆ ಸೂಕ್ತ ಕ್ರಮ ಕಗೊಳ್ಳಬೇಕು ಎಂದು ನಿಯೋಗವು ಒತ್ತಾಯಿಸಿದೆ.
ಮಾಸಾಶನ, ವಿಧವಾವೇತನ, ಸಂಧ್ಯಾಸುರಕ್ಷಾ, ಅಂಗವಿಕಲ ವೇತನ ಮಾಸಿಕ 1200 ರೂ.ನಿಂದ ಕನಿಷ್ಠ 3000 ರೂ.ಗೆ ಏರಿಸಬೇಕು. ನಗರ ಸಹಿತ ಜಿಲ್ಲಾದ್ಯಂತ ಅವೈಜ್ಞಾನಿಕ ಕಾಮಗಾರಿಯಿಂದ ಕೃತಕ ನೆರೆ ಯಾಗುತ್ತಿದೆ. ಸಂಚಾರ ದಟ್ಟನೆ ಹೆಚ್ಚಾಗುತ್ತಿದೆ. ಕಾಂಕ್ರಿಟ್ ರಸ್ತೆ ನಿರ್ಮಾಣದ ಭರಾಟೆಯಲ್ಲಿ ಕಾಲುದಾರಿ ಇಲ್ಲವಾಗಿದೆ. ಹೆಚ್ಚುತ್ತಿರುವ ಪಾರ್ಕಿಂಗ್ ಸಮಸ್ಯೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದೆ.
ಲೀಗ್ ಜಿಲ್ಲಾಧ್ಯಕ್ಷ ಸಿ. ಅಬ್ದುಲ್ ರಹ್ಮಾನ್ ನೇತೃತ್ವದಲ್ಲಿ ನಿಯೋಗದಲ್ಲಿ ಜಿಲ್ಲಾ ಕೋಶಾಧಿಕಾರಿ ರಿಯಾಝ್ ಹರೇಕಳ ಎಚ್ ಮುಹಮ್ಮದ್ ಇಸ್ಮಾಯಿಲ್, ಆದಂ ಹಾಜಿ, ಇಬ್ರಾಹಿಂ ಪಡೀಲ್ ಮತ್ತಿತರರಿದ್ದರು.







