Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಸಂವಿಧಾನ ಕಡೆಗಣನೆಯಿಂದಾಗಿ ದೇಶದಲ್ಲಿ...

ಸಂವಿಧಾನ ಕಡೆಗಣನೆಯಿಂದಾಗಿ ದೇಶದಲ್ಲಿ ಕೋಮು ಗಲಭೆಗಳ ಹೆಚ್ಚಳ: ಅನಿಲ್ ಚೆರಿಯನ್‌

ಸುರತ್ಕಲ್ ಡಿವೈಎಫ್‌ಐನಿಂದ 'ಸೌಹಾರ್ದ ಯುವ ಸಮ್ಮಿಲನ' ಕಾರ್ಯಕ್ರಮ

ವಾರ್ತಾಭಾರತಿವಾರ್ತಾಭಾರತಿ27 Jun 2025 8:15 PM IST
share
ಸಂವಿಧಾನ ಕಡೆಗಣನೆಯಿಂದಾಗಿ ದೇಶದಲ್ಲಿ ಕೋಮು ಗಲಭೆಗಳ ಹೆಚ್ಚಳ: ಅನಿಲ್ ಚೆರಿಯನ್‌

ಸುರತ್ಕಲ್: ಡಿವೈಎಫ್‌ಐ ಸುರತ್ಕಲ್ ವತಿಯಿಂದ “ತುಳುನಾಡಿನ ಸಾಮರಸ್ಯದ ಪರಂಪರೆಯ ಉಳಿವಿಗಾಗಿ, ಕರಾವಳಿಯ ಕೋಮು ಸೌಹಾರ್ದದ ರಕ್ಷಣೆಗಾಗಿ, ಜಾತಿ-ಮತ ಯಾವುದಾದರೇನು ಮನುಷ್ಯ ಒಳ್ಳೆಯವನಾಗಿದ್ದರೆ ಸಾಕು”ಎಂಬ ಸಂದೇಶ ಸಾರುವ ಸೌಹಾರ್ದ ಯುವ ಸಮ್ಮಿಲನ ಕಾರ್ಯಕ್ರಮವು ಕುಳಾಯಿ ಮಹಿಳಾ ಮಂಡಲದಲ್ಲಿ ಶುಕ್ರವಾರ ನಡೆಯಿತು.

ಕಾರ್ಯಕ್ರಮವನ್ನು ಹಳೆಯಂಗಡಿ ಸ.ಪ.ಪೂ. ಕಾಲೇಜಿನ ಉಪನ್ಯಾಸಕ ಅನಿಲ್ ಚೆರಿಯನ್‌ ಉದ್ಘಾಟಿಸಿ ದರು. ಬಳಿಕ ಮಾತನಾಡಿದ ಅವರು, ಜಾತಿ, ಧರ್ಮಗಳ ಹೆಸರಿನಲ್ಲಿ ದೇಶವನ್ನು ಭಾಗ ಮಾಡಲು ಹವಣಿ ಸುತ್ತಿರುವಾಗ ಡಿವೈಎಫ್ಐ ಸುರತ್ಕಲ್ ಈ ಕಾರ್ಯಕ್ರಮದ ಮೂಲಕ ಒಗ್ಗೂಡಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಭಾರತದಲ್ಲಿ ಸಂವಿಧಾನ ಎಲ್ಲದಕ್ಕಿಂತಲೂ ಮಿಗಿಲಾದ ಸ್ಥಾನವನ್ನು ಪಡೆಯಬೇಕಿತ್ತು ಆದರೆ ಪ್ರಸ್ತುತ ಸಂವಿಧಾನವು ಜಾತಿ ಧರ್ಮಗಳಿಗಿಂತ ಕೀಳಾಗಿ ನೋಡಲಾಗುತ್ತಿದೆ ಇದರ ಪರಿಣಾಮ ದೇಶದಲ್ಲಿ ಕೋಮು ಕಲಬೆಗಳಂತಹ ಘಟನೆಗಳು ನಡೆಯುತ್ತಿವೆ ಎಂದರು.

ಭಾರತ ಪ್ರಜಾಪ್ರಭುತ್ವ ದೇಶವಾಗಿದ್ದರು ಅದು ರಾಜಕೀಯಕಷ್ಟೇ ಸೀಮಿತವಾಗಿದೆ. ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಪ್ರಜಾಪ್ರಭುತ್ವ ಇಲ್ಲದಾಗಿದೆ. ಹಾಗಾಗಿ ದೇಶದಲ್ಲಿ ಜಾತಿ ಧರ್ಮಗಳನ್ನು ಮುಂದಿಟ್ಟು, ಗಲಭೆಗಳನ್ನು ನಡೆಸಲಾಗುತ್ತಿದೆ. ಜನರ ತಲೆಗೆ ವಿವೇಕ ವಿವೇಚನೆಯ ಬದಲಿಗೆ ಧರ್ಮ ಎಂಬ ವಿಷಯ ವನ್ನು ತುಂಬಲಾಗುತ್ತಿದೆ. ಇದನ್ನು ಸಾಂಸ್ಕೃತಿಕವಾಗಿ ಇಲ್ಲದಾಗಿಸಲು ವಿವಿಧ ಪ್ರಕಾರದ ಕಾರ್ಯಕ್ರಮಗಳ ಮೂಲಕ ಯುವ ಸಮುದಾಯಕ್ಕೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಚರಿಯನ್ ನುಡಿದರು.

ಬಳಿಕ ಮಾತನಾಡಿದ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ, ಧರ್ಮ‌ ಮತ್ತು ರಾಜಕೀಯ ಒಂದಾದಾಗ ಧರ್ಮ ಸಂಘರ್ಷಗಳು ಉಂಟಾಗುತ್ತವೆ. ಇದೇ ಪರಿಸ್ಥಿತಿ ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ಹಾಗಾಗಿ ಮಂಗಳೂರಿನಲ್ಲಿ ಬದುಕುವುದು ಅಸಾಧ್ಯ ಎಂದ ಅವರು ಮಂಗಳೂರು ಸುರಕ್ಷಿತವಲ್ಲ ಎಂದು ಆತಂಕ‌ ವ್ಯಕ್ತಪಡಿಸಿದರು.

ಕೋಮು ಗಲಭೆಗಳಂತಹ ಘಟನೆಗಳು ಸಂಭವಿಸಿದಾಗ ಸಾರ್ವಜನಿಕರು ಮೌನವಾಗಿದ್ದು ಅಪರಾಧ ಕೃತ್ಯಗಳಿಗೆ ಕುಮ್ಮಕ್ಕು ನೀಡುವ ಬದಲು ಪ್ರಶ್ನಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಹೀಗಾದರೆ ಮಾತ್ರ ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದರು.

ಡಿವೈಎಫ್‌ಐ ದ.ಕ.‌ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮಾತನಾಡಿ, ಮಂಗಳೂರು 7 ಗಂಟೆಗೆ ಸಂಫೂರ್ಣ ಸ್ತಬ್ದ ವಾಗುತ್ತಿದೆ.‌ ಕತ್ತಲಾಗುತ್ತಲೇ ಮನೆ ಸೇರುವ ಪರಿಸ್ಥಿತಿ ಇದೆ. ಈ ಪರಿಸ್ಥಿತಿಯನ್ನು ಸರಿಪಡಿಸುವ ಕೆಲಸ‌ ಆಗಬೇಕು.‌ ರಾಜಕೀಯ ಲಾಭಕ್ಕಾಗಿ ನಮ್ಮ ನಂಬಿಕೆಗಳು ಸೌಹಾರ್ದ ಬದುಕನ್ನು ಹೊಡೆದು ಹಾಕಲಾಗುತ್ತಿದೆ. ಯಾವುದೇ ವೈಯಕ್ತಿಕ ದ್ವೇಷ ಇಲ್ಲದೆ ಇದ್ದರೂ ರಾಜಕೀಯ ದುರುದ್ದೇಶಕ್ಕಾಗಿ ನಾಥೂರಾಮ್‌ ಗೋಡ್ಸೆ ಗಾಂಧಿಯನ್ನು ಕೊಲೆಗೈದಂತೆ ಅಬ್ದುಲ್ ರಹಿಮಾನ್ ನನ್ನೂ ಅದೇ ಕಾರಣಕ್ಕಾಗಿ ಕೊಲೆಗೈಯ್ಯಲಾಗಿದೆ ಎಂದರು.

ಉದ್ಯೋಗ, ಆರೋಗ್ಯ ಸಮಸ್ಯೆ‌, ಶಿಕ್ಷಣ ವ್ಯಾಪಾರೀಕರಣಗಳು ನಡೆಯುತ್ತಿದ್ದರೆ, ಅಸನ್ನು ಪ್ರಶ್ನಿಸಬೇಕಾಗಿ ರುವ ಯುವಕರನ್ನು ಧರ್ಮದ ಹೆಸರಿನಲ್ಲಿ ದಾರಿ ತಪ್ಪಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲಾಗುತ್ತಿದೆ‌ ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದರು.

ಇದೇ ಸಂದರ್ಭ ಸೌಹಾರ್ದ ಸಾರುವ ಪೋಸ್ಟರ್ ಗಳನ್ನು ಅತಿಥಿಗಳು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಕಾರ್ಮಿಕ‌ ಮುಖಂಡ ಸದಾಶಿವ ಶೆಟ್ಟಿ ಹೊಸಬೆಟ್ಟು, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಶ್‌ ಕುಮಾರ್ ಬಜಾಲ್, ವಕೀಲರು ಹಾಗೂ ಮೊಗವೀರ‌ ಸಮುದಾಯದ ಮುಖಂಡ ಗಂಗಾಧರ್‌ ಗುರಿಕಾರ್‌, ಸಾಮಾಜಿಕ ಹೋರಾಟಗಾರ ಟಿ.ಎನ್. ರಮೇಶ್ ಮೊದಲಾದವರು ಮಾತನಾಡಿದರು.

ಮಾಜಿ ಕಾರ್ಪೊರೇಟರ್ ಅಯಾಝ್ ಕೃಷ್ಣಾಪುರ, ಸಿಪಿಎಂ ಮುಖಂಡ ಮುನೀರ್ ಕಾಟಿಪಳ್ಳ, ಡಿವೈಎಫ್ ಐ ಮುಖಂಡರಾಗ ಆಶಾ ಬೈಕಂಪಾಡಿ, ರಾಜೇಶ್‌ ಕುಳಾಯಿ, ಕೊರಗ ಸಮುದಾಯದ ಮುಖಂಡರಾದ ಜಯ ಮಧ್ಯ ಸಲೀಮ್ ಶಾಡೊ ಶರೀಫ್ ಜನತಾ ಕಾಲನಿ, ಡಿವೈಎಫ್ಐ ಸುರತ್ಕಲ್ ವಲಯಾಧ್ಯಕ್ಷ ಬಿ.ಕೆ. ಮಕ್ಸೂದ್ ಮೊದಲಾದವರಿದ್ದರು.

ಪಕ್ಷ, ಧರ್ಮಕ್ಕಾಗಿ ಸಾಯಲು ಬಡವರ‌ ಮಕ್ಕಳ ಬಳಕೆ: ಪ್ರತಿಭಾ ಆಕ್ರೋಶ

ಸದಾಕಾಲ ಕೋಮ ಸೌಹಾರ್ದ ಕೆಡಿಸುವ ಭಾಷಣಗಳನ್ನು ಮಾಡುತ್ತಿರುವ ಶಾಸಕರಾದ ಭರತ್ ಶೆಟ್ಟಿ ಮತ್ತು ವೇದವ್ಯಾಸ ಕಾಮತ್ ಅವರನ್ನು ಇಂತಹ ಸೌಹಾರ್ದ ಬಿತ್ತು ಕಾರ್ಯಕ್ರಮಗಳಿಗೆ ಆಹ್ವಾನಿಸಬೇಕು. ರಾಜಕಾರಣಿಗಳ ಮಕ್ಕಳು ಹೊರದೇಶದಲ್ಲಿ ಕಲಿಯುತ್ತಿದ್ದರೆ ಪಕ್ಷ, ಧರ್ಮಕ್ಕಾಗಿ ಸಾಯಲು ಬಡವರ‌ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ‌ ಎಂದು ಪ್ರತಿಭಾ ಕುಳಾಯಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಬ್ಯಾರಿ ಸಮುದಾಯದ ಸಾಂಸ್ಕೃತಿ ಹಿಂದೂ ಧರ್ಮದ ಆಚರಣೆಗಳೊಂದಿಗೆ‌ ಮಿಳಿತವಾಗಿದೆ. ದೇಶದಲ್ಲಿ ಆಚರಣೆಗಳನ್ನು ವಿರೋಧಿಸುವ ಕೆಲಸವಾಗುತ್ತಿದೆ. ಹೊರತು ನಿವಾರಣೆಗೆ ಮುಂದಾಗಿಲ್ಲ. ನಾವು ಉಳಿಯ ಬೇಕಿದ್ದರೆ ದೇಶ ಉಳಿಯ ಬೇಕಿದೆ. ಇದೇ ರೀತಿಯ ಪರಿಸ್ಥಿತಿ‌ಮುಂದುವರಿದೆ ಜನರು‌ ದೇಶದ ಜನರ‌ ಜೀವನ, ಆರ್ಥಿಕತೆ ದುಸ್ತರವಾಗಲಿದೆ".

-ಅನಿಲ್ ಚೆರಿಯನ್, ಉಪನ್ಯಾಸಕರು ಸ.ಪ.ಪೂ.‌ಕಾಲೇಜು







share
ವಾರ್ತಾಭಾರತಿ
ವಾರ್ತಾಭಾರತಿ
Next Story
X