ಎಸ್‌ವೈಎಸ್ ದ.ಕ ಜಿಲ್ಲಾ ವತಿಯಿಂದ ಕೂರತ್ ತಂಙಳ್ ಉರೂಸ್‌ಗೆ ದೇಣಿಗೆ

ಪುತ್ತೂರು: ಹಲವು ಮೊಹಲ್ಲಾಗಳ ಖಾಝಿಗಳಾಗಿದ್ದ ಖುರ‌್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್‌ರ 1ನೇ ಉರೂಸ್ ಪ್ರಯುಕ್ತ ಎಸ್‌ವೈಎಸ್ ದ.ಕ ಈಸ್ಟ್ ಜಿಲ್ಲಾ ಸಮಿತಿಯ ಸೂಚನೆಯಂತೆ ದ.ಕ. ವ್ಯಾಪ್ತಿಯ 205 ಯುನಿಟ್‌ಗಳಿಂದ ಸಂಗ್ರಹಿಸಿದ 6 ಲಕ್ಷ ರೂ. ಚೆಕ್ಕನ್ನು ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕರ್ ಮುಸ್ಲಿಯಾರ್‌ರ ಮೂಲಕ ಹಸ್ತಾಂತರಿಸಲಾಯಿತು.
ಈ ಸಂದರ್ಭ ಜಿಲ್ಲಾಧ್ಯಕ್ಷ ಅಶ್ರಫ್ ಸಖಾಫಿ ಮೂಡಡ್ಕ, ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಮುರ, ಕೋಶಾಧಿಕಾರಿ ಶಾಫಿ ಸಖಾಫಿ ಕೊಕ್ಕಡ, ಜಿಲ್ಲಾ ಉಸ್ತುವಾರಿ ಹಂಝ ಮದನಿ ಗುರುವಾಯನಕೆರೆ, ಸಾಂತ್ವನ ಇಸಾಬ ಉಪಾಧ್ಯಕ್ಷ ಉಸ್ಮಾನ್ ಸೋಕಿಲ, ಕಾರ್ಯದರ್ಶಿ ಸಲೀಂ ಕನ್ಯಾಡಿ, ದಅವಾ ಉಪಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ ಮತ್ತಿತರರು ಉಪಸ್ಥಿತರಿದ್ದರು.
Next Story





