ಉಳ್ಳಾಲ: ಸೌಹಾರ್ದ ರಕ್ತದಾನ ಶಿಬಿರ

ಉಳ್ಳಾಲ: ಸಾಲಿಡಾರ್ಟಿ ಯೂತ್ ಮೂವ್ ಮೆಂಟ್ ಉಳ್ಳಾಲ, ಸದ್ಭಾವನಾ ವೇದಿಕೆ ಉಳ್ಳಾಲ, ಪೊಸಕುರಲ್ ತೊಕ್ಕೊಟ್ಟು, ಸೋಶಿಯಲ್ ಸರ್ವಿಸ್ ಸೆಂಟರ್, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಹಾಗೂ ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಸೌಹಾರ್ದ ರಕ್ತದಾನ ಶಿಬಿರ ಮಸ್ಜುದುಲ್ ಹುದಾ ತೊಕ್ಕೊಟ್ಟು ವಿನಲ್ಲಿ ನಡೆಯಿತು .
ಶಿಬಿರವನ್ನು ಉದ್ಘಾಟಿಸಿದ ಸದ್ಭಾವನಾ ವೇದಿಕೆ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಮಾತನಾಡಿ, ಈ ಕಾರ್ಯಕ್ರಮ ಮಸೀದಿಗೆ ಮಾತ್ರ ಸೀಮಿತ ಆಗದೇ ಎಲ್ಲಾ ಧಾರ್ಮಿಕ ಕ್ಷೇತ್ರ ಗಳಿಗೂ ಅನ್ವಯವಾಗಬೇಕು. ರಕ್ತದಾನ ಎಲ್ಲಕ್ಕಿಂತ ಮಿಗಿಲಾದ ದಾನ ಆಗಿದೆ.ರಕ್ತ ಮನುಷ್ಯನ ಜೀವ ಉಳಿಸುವ ಸಾಧನ . ನಮ್ಮ ದೇಶದಲ್ಲಿ ರಕ್ತದ ಕೊರತೆ ಇದೆ. ಇದನ್ನು ನೀಗಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಪೊಸಕರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಮಾತನಾಡಿ, ರಕ್ತದ ಕೊರತೆ, ಹಾಗೂ ಈ ಸಮಸ್ಯೆ ಪರಿಹಾರದ ಬಗ್ಗೆ ಮಾಹಿತಿ ನೀಡಿದರು.
ಮಸ್ಜುದುಲ್ ಹುದಾ ತೊಕ್ಕೊಟ್ಟು ಖತೀಬ್ ಮೊಹಮ್ಮದ್ ಕುಂಞಿ ಸಮಾರೋಪ ಭಾಷಣ ಮಾಡಿದರು.
ಈ ಕಾರ್ಯಕ್ರಮ ದಲ್ಲಿ ಮಸ್ಜುದುಲ್ ಹುದಾ ತೊಕ್ಕೊಟ್ಟು ಅಧ್ಯಕ್ಷ ಅಧ್ಯಕ್ಷ ಎ.ಎಚ್.ಮೆಹಮೂದ್, ಅಬ್ದುಲ್ ಮಜೀದ್ , ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ದ ಅಧ್ಯಕ್ಷ ನಝೀರ್ ಹುಸೈನ್,ಸದಸ್ಯ ಅಬ್ದುಲ್ ಹಮೀದ್ ಗೊಳ್ತಮಜಲ್, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಳ್ಳಾಲ ಅಧ್ಯಕ್ಷ ಜೆಬಿ ಹುಸೈನ್ ಮತ್ತಿತರರು ಉಪಸ್ಥಿತರಿದ್ದರು
ಸೋಶಿಯಲ್ ಸರ್ವಿಸ್ ವಿಭಾಗದ ಅಧ್ಯಕ್ಷ ಇಸಾಕ್ ಹಸನ್ ಸ್ವಾಗತಿಸಿದರು. ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಅಧ್ಯಕ್ಷ ಯೂಸುಫ್ ಅಸ್ಲಮ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಝಮ್ಮಿಲ್ ತೊಕ್ಕೊಟ್ಟು ಕಾರ್ಯಕ್ರಮ ನಿರೂಪಿಸಿದರು. ನಿಝಾಮ್ ತೊಕ್ಕೊಟ್ಟು ವಂದಿಸಿದರು.







