ನೀಟ್, ಸಿಇಟಿ: ಬಡ ಮುಸ್ಲಿಮ್ ವಿದ್ಯಾರ್ಥಿಗಳಿಗೆ ಮೀಫ್ ವತಿಯಿಂದ ತರಬೇತಿ

ಮಂಗಳೂರು, ಜೂ.30: ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ನೀಟ್ ರಿಪೀಟರ್ಸ್ ಮತ್ತು ಸಿಇಟಿ ಮೂಲಕ ಆಯ್ಕೆಗೊಳ್ಳಲಿರುವ ಮುಸ್ಲಿಮ್ ವಿದ್ಯಾರ್ಥಿಗಳಿಗೆ ಮೀಫ್ ವತಿಯಿಂದ ಈ ಕೆಳಗಿನ ಸೌಲಭ್ಯಗಳು ದೊರೆಯಲಿವೆ.
ನೀಟ್ ರಿಪೀಟರ್ಸ್: ಪಿಯುಸಿ ಯಲ್ಲಿ ಶೇ 90ಕ್ಕಿಂತ ಅಧಿಕ ಮತ್ತು ನೀಟ್ ಪರೀಕ್ಷೆಯಲ್ಲಿ 250ಕ್ಕೂ ಅಧಿಕ ಅಂಕ ಗಳಿಸಿ, ಮೆಡಿಕಲ್ ಸೀಟು ಸಿಗದೇ ನೀಟ್ ರಿಪೀಟರ್ಸ್ ತರಬೇತಿ ಮುಂದುವರಿಸಲು ಬಯಸುವ ವಿದ್ಯಾರ್ಥಿಗಳಿಗಾಗಿ ಮಂಗಳೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ 40 ಉಚಿತ ಸೀಟುಗಳು ಲಭ್ಯವಿದೆ.
ಸಿಇಟಿ ಯಲ್ಲಿ ಆಯ್ಕೆಗೊಂಡ ವಿದ್ಯಾರ್ಥಿಗಳು: ಸಿಇಟಿ ಮೂಲಕ ವಿವಿಧ ವೃತ್ತಿಪರ ಕೋರ್ಸುಗಳಿಗೆ ಸರಕಾರಿ ಕೋಟಾದಲ್ಲಿ ಸೀಟು ಪಡೆದ ವಿದ್ಯಾರ್ಥಿಗಳಿಗೆ ಅವರ ಫೀಸು ಭರಿಸಲು ಗರಿಷ್ಠ ರೂ. 25,000 ವಿದ್ಯಾರ್ಥಿ ವೇತನ ನೀಡಲಾಗುವುದು. 20 ವಿದ್ಯಾರ್ಥಿಗಳಿಗೆ ಈ ಅವಕಾಶ ಇದೆ.
ಅರ್ಹ ಬಡ ಮುಸ್ಲಿಮ್ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಪಡೆಯಲು ಮೀಫ್ ಕಚೇರಿಗೆ 2025 ಜುಲೈ 12ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ಮಾಹಿತಿಗಾಗಿ ಮೀಫ್ ಕಚೇರಿ ವ್ಯಾಟ್ಸ್ ಆ್ಯಪ್ ಸಂಖ್ಯೆ 8792115666 ಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.





