ಯುವಕ ನಾಪತ್ತೆ: ಪತ್ತೆಗೆ ಮನವಿ

ಮಂಗಳೂರು, ಜೂ.30:ನಗರದ ಬಡಗ ಎಕ್ಕಾರು ಗ್ರಾಮದ ನೀರುಡೆ ಸೈಟ್ ನಿವಾಸಿ ಯುವರಾಜ್ ಶೆಟ್ಟಿ (37) ಎಂಬವರು ಮುದರಂಗಡಿಗೆ ಹೋಗಿ ಬರುವುದಾಗಿ ತಿಳಿಸಿ ಕೆಲಸಕ್ಕೂ ಹೋಗದೆ ಮನೆಗೂ ಬಾರದೆ ಕಾಣೆಯಾಗಿರುವ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದವರ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಬಜಪೆ ಪೋಲಿಸ್ ಠಾಣೆ ಸಂರ್ಕಿಸುವಂತೆ ಠಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





