ಫಾದರ್ ಮುಲ್ಲರ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವೈದ್ಯರ ದಿನಾಚರಣೆ

ಮಂಗಳೂರು: ಫಾದರ್ ಮುಲ್ಲರ್ ಚಾರಿಟೆಬಲ್ ಇನ್‌ಸ್ಟಿಟ್ಯೂಷನ್ಸ್ (ಎಫ್‌ಎಂಸಿಐ) , ನೇತ್ರವಿಜ್ಞಾನ ವಿಭಾಗದ ಆಶ್ರಯದಲ್ಲಿ ನಗರದ ಫಾದರ್ ಮುಲ್ಲರ್ ವೈದ್ಯಕೀಯ ಮಹಾವಿದ್ಯಾಲಯ (ಎಫ್‌ಎಂಸಿಐ)ದಲ್ಲಿ ಮಂಗಳವಾರ ಕ್ಲಿನಿಕಲ್ ಸೊಸೈಟಿ ಸಮಾವೇಶ ‘ರಾಷ್ಟ್ರೀಯ ವೈದ್ಯರ ದಿನಾಚರಣೆ ’ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಫ್‌ಎಂಸಿಐ ನಿರ್ದೇಶಕ ಫಾದರ್ ಫಾಸ್ಟಿನ್ ಲೂಕಾಸ್ ಲೋಬೊ ಅವರು ಎಂತಹ ವೈದ್ಯರು ಸಮಾಜಕ್ಕೆ ಸಲ್ಲಿಸುವ ಸೇವೆ ಅನನ್ಯವಾಗಿದೆ. ಫಾದರ್ ಮುಲ್ಲರ್ ಆಸ್ಪತ್ರೆ ಗಳಲ್ಲಿ ಚಿಕಿತ್ಸೆ ಹಾಗೂ ಕಾಳಜಿ ಇವು ಸಮಾಜದ ಎಲ್ಲವರ್ಗಕ್ಕೂ ಸಮಾನವಾಗಿ ಲಭ್ಯ. ಭಗವಂತನು ಪರಮ ಚಿಕಿತ್ಸಕ, ಆದರೆ ವೈದ್ಯರ ಕೈಗಳಿಂದ ಆ ಶಕ್ತಿಯು ವ್ಯಕ್ತಗೊಳ್ಳುತ್ತದೆ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಫಾದರ್ ಮುಲ್ಲರ್ ವೈದ್ಯಕೀಯ ಮಹಾವಿದ್ಯಾಲಯದ ಮಾಜಿ ಡೀನ್ ಡಾ. ಜೆ.ಪಿ. ಆಳ್ವ ಅವರು ಮಾತನಾಡಿ ಸಮಗ್ರತೆ ಮತ್ತು ಕಠಿಣ ಪರಿಶ್ರಮ ನಮ್ಮ ವೈದ್ಯಕೀಯ ವೃತ್ತಿಯ ಮೂಲಾಧಾರವಾಗಲಿ. ಸೇವೆ ಮತ್ತು ಏಕತೆಯೊಂದಿಗೆ ಮುನ್ನಡೆಯುವಂತೆ ಕರೆ ನೀಡಿದರು.
ಹೊಸ ಮ್ಯಾಗ್ನೆಟಿಕ್ ಫ್ಯಾಕಲ್ಟಿ ಬ್ಯಾಡ್ಜ್‌ಗಳನ್ನು ನಿರ್ದೇಶಕರವರು ಅನಾವರಣಗೊಳಿಸಿ ನಿರ್ವಹಣಾ ವಿಭಾಗದ ವೈದ್ಯರಿಗೆ ಸಾಂಕೇತಿಕವಾಗಿ ಪ್ರದಾನ ಮಾಡಿದರು.
ವೈದ್ಯಕೀಯ ಮಹಾವಿದ್ಯಾಲಯ ನೇತ್ರವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಮತ್ತು ಕ್ಲಿನಿಕಲ್ ಸೊಸೈಟಿ ಅಧ್ಯಕ್ಷೆ ಡಾ. ಸುನಯನಾ ಭಟ್, ವಿಭಾಗದ ಅಧ್ಯಕ್ಷೆ ಡಾ. ಸರಿತಾ ಆರ್. ಜೆ. ಲೋಬೋ , ಫಾದರ್ ಜಾರ್ಜ್ ಜೀವನ್ ಸಿಕ್ವೇರಾ, ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಆ್ಯಂಟನಿ ಸಿಲ್ವಾನ್ ಡಿ ಸೋಜ, ಉಪ ಡೀನ್ ಡಾ. ಬಿ.ಎಂ. ವೆಂಕಟೇಶ್, ವೈದ್ಯಕೀಯ ಅಧೀಕ್ಷಕ ಡಾ. ಉದಯ್ ಕುಮಾರ್, ಉಪಅಧೀಕ್ಷಕ ಡಾ. ಕಿಶನ್ ಶೆಟ್ಟಿ, ಹೆಚ್ಚುವರಿ ವೈದ್ಯಕೀಯ ಅಧೀಕ್ಷಕ ಡಾ. ಕಿರಣ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಡಾ. ಮಧುರಿಮಾ ನಾಯಕ್ ವಂದಿಸಿದರು. ಡಾ. ಡಿಲನ್ ನೊರೋನ್ಹಾ ಕಾರ್ಯಕ್ರಮ ನಿರೂಪಿಸಿದರು. ಡಾ. ಮೇ ಡಿಸೋಜ ಸ್ಪಾಟ್ ಆಟಗಳನ್ನು ಆಯೋಜಿಸಿದರು.







