ಲಾರಿ - ಬಸ್ ಢಿಕ್ಕಿ: ಮೂವರಿಗೆ ಗಾಯ

ಉಪ್ಪಿನಂಗಡಿ: ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು ಲಾರಿಯ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡ ಘಟನೆ ಇಲ್ಲಿನ ಬೊಳ್ಳಾರ್ ಎಂಬಲ್ಲಿ ಜು.3ರಂದು ನಸುಕಿನ ಜಾವ ನಡೆದಿದೆ.
ಲಾರಿ ಕೂಡಾ ಮಂಗಳೂರು ಕಡೆಗೆ ಸಂಚರಿಸುತ್ತಿದ್ದು, ಭಾರೀ ಮಳೆಯ ಕಾರಣ ಎದುರಿನಿಂದ ಸಾಗುತ್ತಿದ್ದ ಲಾರಿ ಕಾಣದೇ ಬಸ್ ಲಾರಿಯ ಹಿಂಬದಿಗೆ ಢಿಕ್ಕಿಯಾಗಿದೆ ಎನ್ನಲಾಗಿದೆ. ಘಟನೆಯಿಂದ ಬಸ್ ಚಾಲಕ ಹಾಗೂ ಇಬ್ಬರು ಪ್ರಯಾಣಿಕರಿಗೆ ಗಾಯಗಳಾಗಿವೆ. ಗಾಯಗೊಂಡ ಪ್ರಯಾಣಿಕರಿಬ್ಬರನ್ನು ಸಕಾಲದಲ್ಲಿ ಉಪ್ಪಿನಂಗಡಿಯ ರಕ್ಷಕ್ ಹಾಗೂ ಟೀಂ ದಕ್ಷಿಣ ಕಾಶಿ ಆ್ಯಂಬುಲೆನ್ಸ್ ಗಳಲ್ಲಿ ಕರೆದೊಯ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Next Story





