ಪುತ್ತೂರು| ಬಿಜೆಪಿ ಮುಖಂಡನ ಪುತ್ರನಿಂದ ಅತ್ಯಾಚಾರ, ವಂಚನೆ ಪ್ರಕರಣ: ಸಂತ್ರಸ್ತೆಯ ಮನೆಗೆ ಪ್ರತಿಭಾ ಕುಲಾಯಿ ಭೇಟಿ

ಪುತ್ತೂರು: ಸಂತ್ರಸ್ತೆ ಯುವತಿ ಮನೆಗೆ ಹಿಂದುಳಿದ ವರ್ಗದ ಆಯೋಗದ ಸದಸ್ಯೆ ಪ್ರತಿಭಾ ಕುಲಾಯಿ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬುವ ಕಾರ್ಯ ಮಾಡಿದರು.
ಬಳಿಕ ಮಾಧ್ಯಮದ ಜತೆಗೆ ಮಾತನಾಡಿ, ಅನ್ಯಾಯವಾದ ಯುವತಿಯ ಅಮ್ಮನಾಗಿ ನಾನು ಅವಳನ್ನು ಮನೆಗೆ ಸೇರಿಸುವ ಜವಾಬ್ದಾರಿ ನನ್ನದು. ಬಡವರಾಗಿದ್ದು, ತಾಯಿ ಮಗುವಿನ ಸಂಪೂರ್ಣ ಖರ್ಚು ವೆಚ್ಚ ವನ್ನು ನಾನೇ ಭರಿಸುತ್ತೇನೆ. ಕಾರಣಗಳನ್ನು ನೀಡಿ ಯುವಕ ತಪ್ಪಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಇದೆಲ್ಲದಕ್ಕೂ ವಿವಾಹವೊಂದೇ ಪರಿಹಾರವಾಗಿದೆ ಎಂದರು.
ತಪ್ಪು ಮಾಡದ ಮಗುವಿಗೆ ಅಪ್ಪನ ಅಗತ್ಯವಿದೆ. ದುಡ್ಡಿ ಇದ್ದರೂ, ಕಾನೂನಿಗಿಂತ ಯಾರೂ ಮೇಲೆಯಲ್ಲ. ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿಯವರಲ್ಲಿ ಈ ಬಗ್ಗೆ ಮಾತುಕತೆಯನ್ನು ನಡೆಸಿದ್ದೇನೆ. ಆಯೋಗದ ಅಧಿಕಾರಿಗಳಿಂದ ಅಗತ್ಯ ನೆರವು ಲಭಿಸಲಿದೆ. ಹಿಂದುಳಿದ ವರ್ಗದ ಇಲಾಖೆಯಿಂದಲೂ ಅಗತ್ಯ ವ್ಯವಸ್ಥೆ ಮಾಡಲಾಗುವುದು. ಯುವಕನ ಪತ್ತೆ ವಿಚಾರದಲ್ಲಿ ತಾಯಿ ಕರೆದುಕೊಂಡು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಲ್ಲಿ ಮಾತುಕತೆ ನಡೆಸುತ್ತೇನೆ. ಸಂಧಾನಕ್ಕೆ ಒಪ್ಪದಿದ್ದರೆ, ಕೊನೆಯಲ್ಲಿ ಹೆಣ್ಣುಮಕ್ಕಳಿಗೂ ಬೇಕಾದಷ್ಟು ಕಾನೂನಿನ ಅವಕಾಶಗಳಿದೆ ಎಂದರು.
ದಕ್ಷಿಣ ಕನ್ನಡದಂತಹ ಜಿಲ್ಲೆಯಲ್ಲಿ ಇಂತಹ ಘಟನೆ ನಡೆಯುವುದು ಬೇಸರ ತಂದಿದೆ. ನ್ಯಾಯ ಎಂಬುದು ಸಿಕ್ಕಿಲ್ಲ. ಎರಡು ವ್ಯಕ್ತಿಗಳ ಜೀವನದ ಪ್ರಶ್ನೆಯಾದ ಕಾರಣ ತಪ್ಪಿತಸ್ಥರಿಗೆ ಶಿಕ್ಷೆಯಾಗಬಾರದು. ಇಬ್ಬರಿಂದ ತಪ್ಪಾಗಿದ್ದು, ಒಪ್ಪಿಸಿ ಮದುವೆ ಮೂಲಕ ಅದನ್ನು ಸರಿಪಡಿಸಬೇಕಾಗಿದೆ. ಹುಡುಗನ ತಾಯಿ ಶಿಕ್ಷಕಿಯಾಗಿ ಹಲವು ಮಕ್ಕಳ ಜೀವನ ರೂಪಿಸಿದವರು. ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯ ಮಗ ತಪ್ಪು ಮಾಡಿದ್ದು, ಅದನ್ನು ಸರಿಪಡಿಸುವುದು ಅವರ ಧರ್ಮವಾಗಿದೆ ಎಂದರು.







