ವೇಣೂರು: ಡಾ.ರವೀಂದ್ರನಾಥ್ ಪ್ರಸಾದ್ ನಿಧನ

ವೇಣೂರು: ವೇಣೂರಿನ ಪ್ರಸಾದ್ ಕ್ಲಿನಿಕ್ ನ ಡಾ.ರವೀಂದ್ರನಾಥ್ ಪ್ರಸಾದ್ (75) ಜು.3ರಂದು ರಾತ್ರಿ ನಿಧನರಾದರು.
ಇವರು ಬಡಕೋಡಿ ನಿವಾಸಿಯಾಗಿದ್ದು, ವೇಣೂರು ಲಯನ್ಸ್ ಕ್ಲಬ್ ನ ಹಿರಿಯ ಸದಸ್ಯರಾಗಿ, ವೇಣೂರಿನ ಜನಾನುರಾಗಿ ವೈದ್ಯರಾಗಿದ್ದು, ವೇಣೂರಿನಲ್ಲಿ ಹಲವು ವರ್ಷದಿಂದ ವೈದ್ಯರಾಗಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
Next Story