ಮಂಗಳೂರು: ಕೇರಳ ಮೂಲದ ಎಂಎಸ್ಸಿ ವಿದ್ಯಾರ್ಥಿ ಆತ್ಮಹತ್ಯೆ ?

ಮಂಗಳೂರು: ಕೇರಳದ ಕೊಟ್ಟಾಯಂ ಮೂಲದ ವಿದ್ಯಾರ್ಥಿ ಹನೀಫ್ ಎಂಬಾತ ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.
ನಗರದ ಕಾಲೇಜೊಂದರಲ್ಲಿ ಎಂಎಸ್ಸಿ ವಿದ್ಯಾರ್ಥಿಯಾಗಿರುವ ಈತ ಕೋಡಿಯಾಲ್‌ಬೈಲ್ ಬಳಿ ಪೇಯಿಂಗ್ ಗೆಸ್ಟ್ ಆಗಿದ್ದ. ಗುರುವಾರ ರಾತ್ರಿ ಊಟ ಮಾಡಲೆಂದು ಇತರರು ಕರೆದಾಗ ಒಳಗಿನಿಂದ ಯಾವುದೇ ಸ್ಪಂದನ ಇರಲಿಲ್ಲ ಎನ್ನಲಾಗಿದೆ. ಬಳಿಕ ಪರಿಶೀಲಿಸಿದಾಗ ಕಿಟಕಿಗೆ ನೈಲಾನ್ ಹಗ್ಗ ಹಾಕಿ ಕುತ್ತಿಗೆಗೆ ಬಿಗಿದಿರುವುದು ಬೆಳಕಿಗೆ ಬಂದಿದೆ. ಈತನ ಕೈಯಲ್ಲಿ ಬ್ಲೇಡ್‌ನಿಂದ ಗೀರಿದ ಗಾಯಗಳು ಕಂಡು ಬಂದಿದೆ. ಈತ ಈ ಹಿಂದೆಯೂ ಬ್ಲೇಡ್‌ನಿಂದ ಗೀರಿ ಗಾಯಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತದೆ ಎಂದು ಬರ್ಕೆ ಇನ್‌ಸ್ಪೆಕ್ಟರ್ ತಿಳಿಸಿದ್ದಾರೆ.
Next Story





