ಬೆಳ್ತಂಗಡಿ| ಮೃತದೇಹಗಳನ್ನು ಹೂತು ಹಾಕಿರುವುದಾಗಿ ಹೇಳಿದ ವ್ಯಕ್ತಿಯ ದೂರು ದಾಖಲು
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಇಬ್ಬರು ವಕೀಲರ ಮೂಲಕ ಹೇಳಿಕೆ ನೀಡುತ್ತಿದ್ದ ವ್ಯಕ್ತಿಯೋರ್ವ ಜು.3 ರಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಗೆ ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದರು.
ಅದರಂತೆ ಧರ್ಮಸ್ಥಳ ಪೊಲೀಸರು NC ಮಾಡಿ ಹಿಂಬರಹ ನೀಡಿದ್ದರು. ಜುಲೈ 4 ರಂದು ಬೆಳ್ತಂಗಡಿ ನ್ಯಾಯಾಲಯದಿಂದ ದೂರಿನ ಬಗ್ಗೆ ಅನುಮತಿ ಪಡೆದು ಸಂಜೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ BNS 2023(u/s-211(a)) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





