ಧಾರವಾಡ ವಿವಿ ಕುಲಪತಿಯಾಗಿ ಪ್ರೊ.ಎ.ಎಂ.ಖಾನ್ ನೇಮಕ

ಪ್ರೊ.ಎ.ಎಂ.ಖಾನ್
ಕೊಣಾಜೆ: ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಮಂಗಳೂರು ವಿವಿಯ ಪ್ರಾಧ್ಯಾಕರಾಗಿದ್ದ ಪ್ರೊ.ಎ.ಎಂ.ಖಾನ್ ಅವರು ನೇಮಕಗೊಂಡಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಕಳೆದ ಹಲವಾರು ವರ್ಷಗಳಿಂದ ಪ್ರಾಧ್ಯಾಪಕರಾಗಿದ್ದು ಜೊತೆಗೆ ಮಂಗಳೂರು ವಿವಿಯ ಕುಲಸಚಿವರಾಗಿ, ಪರೀಕ್ಷಾಂಗ ಕುಲಸಚಿವರಾಗಿ, ಸಿಂಡಿಕೇಟ್ ಸದಸ್ಯರಾಗಿ ಹಾಗು ಇತರ ಆಡಳಿತ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದರು.
ಮೂಲತಃ ಧಾರವಾಡದವರಾದ ಇವರು ಎಂ.ಎಸ್ಸಿ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ವ್ಯಾಸಾಂಗ, ಪಿಎಚ್ ಡಿ ಸಂಶೋಧನೆ ಸೇರಿದಂತೆ ಕಳೆದ 30 ವರ್ಷಗಳಿಂದ ಬೋಧನಾ ಅನುಭವದೊಂದಿಗೆ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು.
ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಅನೇಕ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಇಸ್ರೋ ಜೊತೆಗೂ ಸಂಶೋಧನೆಗೈದ ಅನುಭವವನ್ನು ಹೊಂದಿದ್ದಾರೆ.
Next Story