ಬಜ್ಪೆ| ಪೊಲೀಸ್ ಸಿಬ್ಬಂದಿಯ ಅವಹೇಳನ ಪ್ರಕರಣ: ಹಿಂಜಾವೆ ಮುಖಂಡ ಸಮಿತ್ ರಾಜ್ಗೆ ಹೈಕೋರ್ಟ್ ಜಾಮೀನು

ಸಮಿತ್ ರಾಜ್ ಧರೆಗುಡ್ಡೆ
ಬಜ್ಪೆ: ಪೊಲೀಸ್ ಸಿಬ್ಬಂದಿಯನ್ನು ಅವಹೇಳನ ಮಾಡಿದ ಪ್ರಕರಣದಲ್ಲಿ ಹಿಂಜಾವೆ ಮುಖಂಡ ಸಮಿತ್ ರಾಜ್ ಧರೆಗುಡ್ಡೆಗೆ ಹೈಕೋರ್ಟ್ ಜಾಮೀನು ನೀಡಿದೆ.
ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಬಜ್ಪೆ ಪೊಲೀಸ್ ಠಾಣೆಯ ಸಿಬ್ಬಂದಿ ಅಬ್ದುಲ್ ರಶೀದ್ ಭಾಗಿಯಾಗಿದ್ದಾರೆ ಎಂದು ಸುಮಿತ್ ರಾಜ್ ಫೇಸ್ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದ. ಈ ಸಂಬಂಧ ಸಮಿತ್ ರಾಜ್ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ ವಿರುದ್ಧ ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್ ನೀಡಿದ್ದರು.
ಪೊಲೀಸ್ ಇಲಾಖೆ ನೋಟಿಸ್ ನೀಡಿದ್ದರೂ ಸಮಿತ್ ರಾಜ್ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಮಿತ್ ರಾಜ್ ನನ್ನು ಬಂಧಿಸಲು ಪೊಲೀಸರು ಆತನ ನಿವಾಸಕ್ಕೆ ತೆರಳಿದ್ದ ಸಂದರ್ಭ ಹೈಕೋರ್ಟ್ ನ ಜಾಮೀನು ಪತ್ರವನ್ನು ನೀಡಿ ಪೊಲೀಸರನ್ನು ಹಿಂದೆ ಕಳುಹಿಸಿರುವುದಾಗಿ ತಿಳಿದು ಬಂದಿದೆ.
Next Story