ಬ್ಯಾರಿ ನಿಘಂಟಿಗೆ ಪದಗಳ ಸಂಗ್ರಹ

ಮಂಗಳೂರು,ಜು.5:ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಈಗಾಗಲೆ ಪ್ರಕಟಿಸಿರುವ ಸುಮಾರು 20 ಸಾವಿರ ಪದಗಳಿರುವ ಬ್ಯಾರಿ, ಕನ್ನಡ, ಇಂಗ್ಲಿಷ್ ನಿಘಂಟನ್ನು ಪರಿಷ್ಕರಿಸಿ, ಡಿಜಿಟಲೀಕರಿಸುವ ಮತ್ತು ಬ್ಯಾರಿ ನಿಘಂಟಿನ ಆ್ಯಪ್ ನಿರ್ಮಿಸಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ನೀಡುವ ಯೋಜನೆಯನ್ನು ಹಮ್ಮಿಕೊಂಡಿದೆ.
ಬ್ಯಾರಿ ಭಾಷೆಯ ಬೆಳವಣಿಗೆ ಮತ್ತು ದಾಖಲೀಕರಣದ ನಿಟ್ಟಿನಲ್ಲಿ ಸಮುದಾಯದ ಸಹಕಾರ ನಿರೀಕ್ಷಿಸಲಾ ಗಿದೆ. ಪ್ರಕಟಿತ ಈ ನಿಘಂಟಿನಲ್ಲಿ ಬಿಟ್ಟು ಹೋಗಿರುವ ಪದಗಳನ್ನು ಸೇರ್ಪಡೆಗೊಳಿಸಲು ಪದಗಳನ್ನು ಆಹ್ವಾನಿಸಲಾಗಿದೆ. ಈ ನಿಘಂಟಿನಲ್ಲಿ ಇಲ್ಲದ ಅತ್ಯಂತ ಹೆಚ್ಚು ಪದಗಳನ್ನು ಕಳುಹಿಸಿಸಿಕೊಟ್ಟವರಿಗೆ ಅಕಾಡಮಿಯ ವತಿಯಿಂದ ನಗದು ಬಹುಮಾನ ನೀಡಲಾಗುವುದು.
ಆಸಕ್ತರು ತಮಗೆ ಗೊತ್ತಿರುವ ಬ್ಯಾರಿ ಪದಗಳನ್ನು ಕನ್ನಡ ಅನುವಾದ ಮತ್ತು ವಿವಿಧ ಸಾಂಧರ್ಬಿಕ ಅರ್ಥಗಳೊಂದಿಗೆ ಅಕಾಡಮಿ ಕಚೇರಿ ವಾಟ್ಸ್‌ಆ್ಯಪ್ ಸಂಖ್ಯೆ 7483946578 ಅಥವಾ ಬ್ಯಾರಿ ಸಾಹಿತ್ಯ ಅಕಾಡಮಿ, ಸಾಮರ್ಥ್ಯ ಸೌಧ, ಮಂಗಳೂರು ತಾಪಂ ಹಳೆ ಕಟ್ಟಡ, 2ನೇ ಮಹಡಿ, ಮಂಗಳೂರು -575001 ಈ ವಿಳಾಸಕ್ಕೆ ಆಗಸ್ಟ್ 3ರೊಳಗೆ ಕಳುಹಿಸಿಕೊಡಬಹುದು ಎಂದು ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.