ದ.ಕ.ಜಿಲ್ಲೆಯ ಮರುನಾಮಕರಣಕ್ಕೆ ಶಾಸಕ ವೇದವ್ಯಾಸ ಕಾಮತ್ ಬೆಂಬಲ

ಮಂಗಳೂರು, ಜು.5: ದ.ಕ.ಜಿಲ್ಲೆಗೆ ಮಂಗಳೂರು ಎಂದು ಮರುನಾಮಕರಣ ಮಾಡುವ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಶಾಸಕ ವೇದವ್ಯಾಸ ಕಾಮತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸರ್ವ ಧರ್ಮ-ಪಕ್ಷ-ಸಂಘಟನೆಗಳು ಒಗ್ಗೂಡಿರುವ ಮಂಗಳೂರು ಜಿಲ್ಲೆ ತುಳುಪರ ಹೋರಾಟ ಸಮಿತಿ ಸಂಚಾಲಕನಾಗಿ ಬೆಂಬಲ ವ್ಯಕ್ತಪಡಿಸುತ್ತೇನೆಂದು ಹೇಳಿರುವ ಶಾಸಕ ವೇದವ್ಯಾಸ ಕಾಮತ್, ಪೋರ್ಚು ಗೀಸ್ ಮತ್ತು ಬ್ರಿಟಿಷರ ಕಾಲದಲ್ಲಿ ತುಳುನಾಡು ಹೋಗಿ ಸೌತ್ ಕೆನರಾ ಆಯಿತು. ಸ್ವತಂತ್ರ ಭಾರತದಲ್ಲಿ ರಾಜ್ಯ ವಿಂಗಡಣೆ ಸಂದರ್ಭ ಸೌತ್ ಕೆನರಾ ದಕ್ಷಿಣ ಕನ್ನಡವಾಗಿ ಬದಲಾಯಿತು. ಆದರೆ ಈ ನೆಲಕ್ಕೂ ದ.ಕ. ಹೆಸರಿಗೂ ಯಾವುದೇ ಸಂಬಂಧವಿಲ್ಲ ಎಂದು ಇತಿಹಾಸದ ಪುಟಗಳು ಹೇಳುತ್ತವೆ. ಜಿಲ್ಲೆಯ ಹೆಸರು ಬದಲಾವಣೆಯಾದಲ್ಲಿ ತುಳು ಭಾಷೆಯ ಹೋರಾಟಕ್ಕೂ ಇನ್ನಷ್ಟು ಪುಷ್ಟಿ ಸಿಗಲಿದೆ ಎಂದಿದ್ದಾರೆ.
Next Story