ಬಂಟ್ವಾಳ : ಮುಂದುವರಿದ ಮಳೆ, ತಾಲೂಕಿನ ವಿವಿಧೆಡೆ ಹಾನಿ

ಬಂಟ್ವಾಳ : ಮುಂದುವರಿದ ಮಳೆಯಿಂದಾಗಿ ತಾಲೂಕಿನ ಹಲವೆಡೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಕೆದಿಲ ಗ್ರಾಮದ ಮಾರಪ್ಪ ಸುವರ್ಣ ಎಂಬುವವರ ಮಾಲಕತ್ವದ ಜಮೀನಿನಲ್ಲಿರುವ ಬ್ರಹ್ಮಶ್ರೀನಾರಾಯಣ ಗುರು ಸೇವಾ ಸಂಘದ ನಿರ್ಮಾಣ ಹಂತದ ಸಭಾ ಭವನದ ಕಟ್ಟಡದ ಮೇಲೆ ಅಕೇಶಿಯಾ ಮರ ಬಿದ್ದು ಭಾಗಶಃ ಹಾನಿಯಾಗಿರುತ್ತದೆ.
ಬಿ.ಮೂಡ ಗ್ರಾಮದ ಭಂಡಾರಿಬೆಟ್ಟು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಮಣ್ಣು ಬಂಡೆಕಲ್ಲು ಜರಿದು ಬಿದ್ದಿದ್ದು ಕೆಲಕಾಲ ರಸ್ತೆ ಸಂಚಾರಕ್ಕೆ ತೊಡಕುಂಟಾಗಿದ್ದು, ತಕ್ಷಣ ತೆರವುಗೊಳಿಸಲಾಗಿದೆ.
ಕಡೇಶ್ವಾಲ್ಯ ಗ್ರಾಮದ ನಡ್ಯೇಲು ಎಂಬಲ್ಲಿ ಕಾಲುಸಂಕ ಮುರಿದು ಬಿದ್ದಿರುತ್ತದೆ. ಘಟನಾ ಪೂರ್ವದಲ್ಲಿಯೇ ಎಚ್ಚರಿಕೆ ಫಲಕ ಅಳವಡಿಸಿರುವ ಹಿನ್ನೆಲೆಯಲ್ಲಿ ಯಾವುದೇ ಅನಾಹುತ ಸಂಭವಿಸಿರುವುದಿಲ್ಲ.
Next Story