ಏಮಾಜೆ : ಸರಕಾರಿ ಪ್ರಾಥಮಿಕ ಶಾಲಾ ಮಂತ್ರಿ ಮಂಡಲದ ಪದಗ್ರಹಣ

ಬಂಟ್ವಾಳ : ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಏಮಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ 2025-26ನೇ ಸಾಲಿನ ಶಾಲಾ ಮಂತ್ರಿಮಂಡಲದ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಶಾಲಾ ವಿದ್ಯಾರ್ಥಿ ನಾಯಕಿಯಾಗಿ ರಿಧಿಕಾ ಶೆಟ್ಟಿ, ಉಪ ನಾಯಕಿಯಾಗಿ ವರ್ಷಾ, ಶಿಕ್ಷಣ ಮಂತ್ರಿಯಾಗಿ ಪ್ರಕೃತಿ, ಸಹ ಶಿಕ್ಷಣ ಮಂತ್ರಿಯಾಗಿ ಜ್ಞಾನೇಶ್, ಆರೋಗ್ಯ ಮಂತ್ರಿಯಾಗಿ ಸಂಪ್ರೀತ್, ಸಹ ಆರೋಗ್ಯ ಮಂತ್ರಿಯಾಗಿ ಸಾನ್ವಿ, ಸಾಂಸ್ಕೃತಿಕ ಮಂತ್ರಿಯಾಗಿ ಅದಿತಿ ಕೆ.ಪಿ., ಸಹ ಸಾಂಸ್ಕೃತಿಕ ಮಂತ್ರಿಯಾಗಿ ವಂದಿತಾ, ತೋಟಗಾರಿಕಾ ಮಂತ್ರಿಯಾಗಿ ಪ್ರಸನ್ನ, ಸಹ ತೋಟಗಾರಿಕಾ ಮಂತ್ರಿಯಾಗಿ ದನ್ವಿಕ್, ಕ್ರೀಡಾ ಮಂತ್ರಿಯಾಗಿ ಶ್ಲೋಕ್ ರೈ ಬಿ., ಸಹ ಕ್ರೀಡಾ ಮಂತ್ರಿಯಾಗಿ ಶೌರ್ಯ ಕುಲಾಲ್, ಸ್ವಚ್ಛತಾ ಮಂತ್ರಿಯಾಗಿ ವೀಕ್ಷ, ಸಹ ಸ್ವಚ್ಛತಾ ಮಂತ್ರಿಯಾಗಿ ಶಾನಿಬಾ, ಗ್ರಂಥಾಲಯ ಮಂತ್ರಿಯಾಗಿ ಖದೀಜ ಮಾಶಿತ, ಸಹ ಗ್ರಂಥಾಲಯ ಮಂತ್ರಿಯಾಗಿ ಕೃತಿಗೆ ಬ್ಯಾಜ್ ತೊಡಿಸುವುದರ ಮೂಲಕ ಅಧಿಕಾರ ನೀಡಲಾಯಿತು.
ಮುಖ್ಯ ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಶಾಲಾ ಮುಖ್ಯ ಶಿಕ್ಷಕಿ ತ್ರಿವೇಣಿ ಪ್ರಮಾಣ ವಚನ ಬೋಧಿಸಿದರು. ಬಳಿಕ ಮಾತನಾಡಿದ ಅವರು ಶಾಲಾ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮಹತ್ವದ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಮಲ್ಲಿಕಾ ಗಣೇಶ್ ಆಚಾರ್ಯ, ಉಪಾಧ್ಯಕ್ಷ ಹರೀಶ್ ಕುಲಾಲ್, ನಿಕಟ ಪೂರ್ವ ಉಪಾಧ್ಯಕ್ಷ ಪ್ರಸಾದ್ ಆಚಾರ್ಯ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸಮಿತಾ, ಸದಸ್ಯರಾದ ಶಕೀಲಾ ಕೆ. ಪೂಜಾರಿ, ಧನಂಜಯ ಗೌಡ ಮೊದಲಾದವರು ಉಪಸ್ಥಿತರಿದ್ದರು.