ಶಾಸಕ ಐವನ್ ಡಿಸೋಜರಿಗೆ ರಿಕ್ಷಾ ಚಾಲಕರಿಂದ ಅಭಿನಂದನೆ

ಮಂಗಳೂರು, ಜು.6: ಬ್ಯಾಟರಿ ಚಾಲಿತ ಆಟೊ ರಿಕ್ಷಾಗಳಿಗೆ ಪರ್ಮಿಟ್ ವ್ಯವಸ್ಥೆ ಮಾಡಲು ರಾಜ್ಯ ಮಟ್ಟದಲ್ಲಿ ಕಾನೂನು ಜಾರಿಗೊಳಿಸಲು ಪ್ರಯತ್ನಿಸಿದ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜರಿಗೆ ರಿಕ್ಷಾ ಚಾಲಕರ ಸಂಘದಿಂದ ಅಭಿನಂದನೆ ಸಲ್ಲಿಸಲಾಯಿತು.
ರಾಜ್ಯದಲ್ಲಿ ಬ್ಯಾಟರಿ ಚಾಲಿತ ರಿಕ್ಷಾಗಳಿಗೆ ಪರವಾನಿಗೆ ಇಲ್ಲದೆ ಯಾವುದೇ ನಿಲ್ದಾಣಗಳಲ್ಲಿ ನಿಲ್ಲಬಹುದು. ರಾಜ್ಯದ ಯಾವುದೇ ಭಾಗಗಳಲ್ಲಿ ಸಂಚರಿಸಬಹುದು ಎಂದು ರಾಜ್ಯ ಸರಕಾರ ಕಾನೂನು ತಿದ್ದುಪಡಿ ಮಾಡಿದೆ. ಅದಕ್ಕಾಗಿ ಐವನ್ ಡಿಸೋಜ ಶ್ರಮಿಸಿದ್ದಾರೆ ಎಂದು ರಿಕ್ಷಾ ಚಾಲಕರ ಸಂಘದ ಒಕ್ಕೂಟ ತಿಳಿಸಿದೆ.
ಈ ಸಂದರ್ಭ ದ.ಕ ಜಿಲ್ಲಾ ಆಟೊ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಭರತ್ ಕುಮಾರ್, ಉಪಾಧ್ಯಕ್ಷ ಶೇಖರ ದೇರಳಕಟ್ಟೆ, ವಿವಿಧ ರಿಕ್ಷಾ ಸಂಘದ ಪದಾಧಿಕಾರಿಗಳಾದ ವಸಂತ ಶೆಟ್ಟಿ ವೀರನಗರ, ಗಣೇಶ್ ಉಳ್ಳಾಲ್, ಅನಿಲ್ ಲೋಬೋ, ರಾಜೇಶ್ ವೀರನಗರ, ವಿಲ್ಫ್ರೆಡ್ ಫೆರ್ನಾಂಡಿಸ್, ರೇಮಂಡ್, ಶೈಲೇಶ್, ಕ್ಲಿಫರ್ಡ್ ಡಿಸೋಜ, ಆಂಟನಿ ಡಿಸೋಜ. ಸ್ಟೀವನ್, ಸೈಮನ್ ಮತ್ತಿತರರು ಉಪಸ್ಥಿತರಿದ್ದರು.
Next Story