ಮಂಗಳೂರು: ಹಡಪದ ಅಪ್ಪಣ್ಣ ಜಯಂತಿ

ಮಂಗಳೂರು, ಜು.10: ದ.ಕ. ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಾಗೂ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಸಹಕಾರದೊಂದಿಗೆ ಗುರುವಾರ ತುಳುಭವನದಲ್ಲಿ ಹಡಪದ ಅಪ್ಪಣ್ಣ ಜಯಂತಿ ನಡೆಯಿತು.
ನಿವೃತ್ತ ಪ್ರಾಧ್ಯಾಪಕಿ ಡಾ.ಮೀನಾಕ್ಷಿ ರಾಮಚಂದ್ರ ಮಾತನಾಡಿ 12ನೇ ಶತಮಾನದ ಶ್ರೇಷ್ಟ ಅನುಭಾವಿ ಹಡಪದ ಅಪ್ಪಣ್ಣನವರು ಸವಿತಾ ಸಮಾಜದವರು. ಅವರ ಕಾಯಕ ನಿಷ್ಠೆ, ಅನುಭವದಲ್ಲಿ ಏರಿದ ಎತ್ತರಗಳನ್ನು ಗುರುತಿಸಿ ಬಸವಣ್ಣ ತಮ್ಮ ಆಪ್ತಕಾರ್ಯದರ್ಶಿಯನ್ನಾಗಿ ಮಾಡಿಕೊಂಡರು. ಅವರನ್ನು ದರ್ಶಿಸಿದ ಮೇಲೆಯೇ ನಿತ್ಯ ಕಾಯಕಕ್ಕೆ ತಾವೂ ತೊಡಗಿ ಇತರರೂ ತೊಡಗುವಂತೆ ಮಾಡಿದ್ದರು ಎಂದರು.
ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಅಧ್ಯಕ್ಷ ಮಲ್ಲೇಶ್ ಹಡಪದ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು.
Next Story





