ಇಂಜಿನಿಯರಿಂಗ್, ಆರ್ಕಿಟೆಕ್ಚರ್ ಕೋರ್ಸ್‌ಗಳಿಗೆ ಶುಲ್ಕ ಹೆಚ್ಚಳಕ್ಕೆ ಖಂಡನೆ

ಮಂಗಳೂರು, ಜು.10: ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕೋರ್ಸ್‌ಗಳಿಗೆ ಶುಲ್ಕ ಹೆಚ್ಚಳ ಮಾಡಿರುವ ರಾಜ್ಯ ಸರಕಾರದ ನಡೆಯನ್ನು ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯು ತೀವ್ರವಾಗಿ ಖಂಡಿಸುತ್ತದೆ ಎಂದು ಸಂಘದ ಸಂಚಾಲಕ ವಿನಯ್ ಚಂದ್ರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಖಾಸಗಿ ಅನುದಾನರಹಿತ ಕಾಲೇಜುಗಳಲ್ಲಿನ ಸರಕಾರಿ ಸೀಟುಗಳ ಶುಲ್ಕವನ್ನು ಶೇ.7.5ರಷ್ಟು ಹೆಚ್ಚಿಸಲಾ ಗಿದೆ. ಸರಕಾರಿ ಕಾಲೇಜುಗಳ ಶುಲ್ಕವನ್ನು ಶೇ.5ರಷ್ಟು ಹೆಚ್ಚಿಸಲಾಗಿದೆ. ಶುಲ್ಕಗಳನ್ನು ಹೆಚ್ಚಿಸುವುದೇ ರಾಜ್ಯ ಸರಕಾರದ ಕಾರ್ಯವೈಖರಿಯಾಗಿದೆ. ರೈತ, ಕಾರ್ಮಿಕರು ಸೇರಿದಂತೆ ನಾಡಿನ ಜನರು ಆರ್ಥಿಕ ಸಂಕಷ್ಟ ವನ್ನು ಎದುರಿಸುತ್ತಿರುವ ಸಂದರ್ಭ ರಾಜ್ಯ ಸರಕಾರವು ಶುಲ್ಕಗಳನ್ನು ಹೆಚ್ಚಿಸಿರುವುದು ಸರಿಯಲ್ಲ. ರಾಜ್ಯ ಸರಕಾರವು ತಕ್ಷಣ ವಿದ್ಯಾರ್ಥಿ ಹಾಗೂ ಜನ ವಿರೋಧಿ ನಿಲುವನ್ನು ಕೈಬಿಟ್ಟು ಶುಲ್ಕಗಳನ್ನು ಕಡಿತಗೊಳಿಸ ಬೇಕೆಂದು ಎಐಡಿಎಸ್‌ಒ ಆಗ್ರಹಿಸಿದೆ.
Next Story





