ಕಸಬಾ ಬೆಂಗರೆ: ಕೌಶಲ್ಯ ಅಭಿವೃದ್ಧಿ ಯೋಜನೆಯ ಕಟ್ಟಡ ಕಾಮಗಾರಿ ಪುನರಾರಂಭಕ್ಕೆ ಮನವಿ

ಮಂಗಳೂರು, ಜು.10: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸೇರಿದ ಕೌಶಲ್ಯ ಅಭಿವೃದ್ಧಿ ಯೋಜನೆಯ ಕಟ್ಟಡ ಕಾಮಗಾರಿಯು ಅರ್ಧಕ್ಕೆ ಸ್ಥಗಿತಗೊಂಡಿದ್ದು, ಇದರಿಂದ ಈ ಕಟ್ಟಡವು ಸೊಳ್ಳೆ ಉತ್ಪಾದನೆ ಕೇಂದ್ರವಾಗಿ ಮಾರ್ಪಟ್ಟಿವೆ. ಹಾಗಾಗಿ ಈ ಕಟ್ಟಡದ ಕಾಮಗಾರಿಯನ್ನು ಪುನರಾರಂಭಿಸುವಂತೆ ಕಸಬಾ ಬೆಂಗರೆ ಡಿವೈಎಫ್‌ಐ ಸಮಿತಿಯು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗೆ ಮನವಿ ಸಲ್ಲಿಸಿದೆ.
ಈ ಕಟ್ಟಡದ ಸುತ್ತಮುತ್ತ ನೀರು ನಿಲ್ಲುತ್ತಿದ್ದು, ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುವಂತಿದೆ. ಮೂರು ಅಂತಸ್ತಿನ ಅರ್ಧದಲ್ಲಿ ನಿಂತಿರುವ ಈ ಕಟ್ಟಡಕ್ಕೆ ಬಾಗಿಲುಗಳು ಇಲ್ಲ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಡಿವೈಎಫ್‌ಐ ಬೆಂಗ್ರೆ ಗ್ರಾಮ ಸಮಿತಿಯ ಅಧ್ಯಕ್ಷ ಹನೀಫ್ ಬೆಂಗ್ರೆ, ಮುಖಂಡರಾದ ತೈಯೂಬ್ ಬೆಂಗ್ರೆ, ಮುಹಾಝ್, ನಾಸಿರ್ ಬಾಸ್ ಬೆಂಗ್ರೆ ನಿಯೋಗದಲ್ಲಿದ್ದರು.
Next Story





