ಯುವಕ ನಾಪತ್ತೆ

ಮಂಗಳೂರು, ಜು.10: ನಗರದ ಬೊಕ್ಕಪಟ್ಟಣದ ಬೇಕರಿ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಮೈಸೂರು ಜಿಲ್ಲೆಯ ಅಡಹಳ್ಳಿ ಗ್ರಾಮದ ಶನಿದೇವರ ದೇವಸ್ಥಾನ ಬಳಿಯ ನಿವಾಸಿ ಮಹಾದೇವಸ್ವಾಮಿ ಯಾನೆ ಅಪ್ಪು (20) ಎಂಬಾತ ನಾಪತ್ತೆಯಾದ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜು.4ರಂದು ಬೆಳಗ್ಗೆ 9ಕ್ಕೆ ಅಂಗಡಿ ಮಾಲಕರ ಬಳಿ ನಾನಿನ್ನು ಕೆಲಸಕ್ಕೆ ಬರುವುದಿಲ್ಲ, ಊರಿಗೆ ಹೋಗುತ್ತೇನೆ ಎಂದು ಹೇಳಿ ಹೋದವ ಊರಿಗೂ ಹೋಗದೆ ನಾಪತ್ತೆಯಾಗಿದ್ದಾನೆ ಎಂದು ಸಹೋದರ ಅಭಿಲಾಷ್ ಬರ್ಕೆ ಠಾಣೆಗೆ ದೂರು ನೀಡಿದ್ದಾರೆ.
ಸುಮಾರು 5 ಅಡಿ ಎತ್ತರದ, ಗೋಧಿ ಮೈಬಣ್ಣದ, ಸಾಧಾರಣ ಶರೀರದ ಈತ ಕನ್ನಡ ಭಾಷೆ ಮಾತನಾಡುತ್ತಾನೆ. ಸುಮಾರು ಮೂರು ತಿಂಗಳಿನಿಂದ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story





