ರೋಟರಿ ಕ್ಲಬ್ ದೇರಳಕಟ್ಟೆ: ನೂತನ ಪದಾಧಿಕಾರಿಗಳ ಪದಗ್ರಹಣ

ಮಂಗಳೂರು, ಜು.10: ‘ಸಂಸ್ಥೆಯ ಪದಾಧಿಕಾರಿಗಳು ಕ್ರಿಯಾಶೀಲರಾಗಿ ಸಂಸ್ಥೆಗೆ ನೂತನ ಸದಸ್ಯರನ್ನು ಸೇರ್ಪಡೆಗೊಳಿಸಿ ಸಂಸ್ಥೆಯಲ್ಲಿ ನವೀನತೆಯನ್ನು ಪರಿಚಯಿಸಬೇಕು.
ನಿಸ್ವಾರ್ಥ ಸೇವಾ ಮನೋಭಾವದಿಂದ ಸಮಾಜದ ಶ್ರೇಯೋಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ರೋಟರಿ ಜಿಲ್ಲಾ 3181 ರ ಮಾಜಿ ಗವರ್ನರ್ ಡಾ. ದೇವದಾಸ್ ರೈ ಸಲಹೆ ನೀಡಿದ್ದಾರೆ.
ನಗರದ ಈಡನ್ ಕ್ಲಬ್ ಸಭಾಂಗಣದಲ್ಲಿ ಬುಧವಾರ ನಡೆದ ರೋಟರಿ ಕ್ಲಬ್ ದೇರಳಕಟ್ಟೆ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣದ ವಿಧಿವಿಧಾನವನ್ನು ನೆರವೇರಿಸಿ ಮಾತನಾಡಿದರು.
ರೋಟರಿ ಜಿಲ್ಲಾ ವಲಯ ಸಹಾಯಕ ಗವರ್ನರ್‌ದಾದ ಡಾ. ರವಿಶಂಕರ್ ರಾವ್‌ರವರು ಗೌರವ ಅತಿಥಿಯಾಗಿ ಪಾಲ್ಗೊಂಡು ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರು. ವಿಕ್ರಮ್ ದತ್ತ ಸಂಪಾದಕತ್ವದ ಸಂಸ್ಥೆಯ ಗೃಹವಾರ್ತಾ ಪತ್ರಿಕೆ ‘‘ನ್ಯೂ ಹೊರೈಜನ್ಸ್’’ ಬಿಡುಗಡೆಗೊಳಿಸಿದರು.
ವಲಯ ಅಧಿಕಾರಿ ಪ್ರಶಾಂತ್ ರೈ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯು ಜಿಲ್ಲಾ ಮಟ್ಟದಲ್ಲಿ ಪಡೆದ ಡೈಮಂಡ್ ಪ್ರಶಸ್ತಿಯನ್ನು ಶ್ಲಾಘಿಸಿ ನೂತನ ತಂಡವನ್ನು ಅಭಿನಂದಿಸಿದರು.
ನಿರ್ಗಮನ ಅಧ್ಯಕ್ಷೆ ಸೌಮ್ಯ ಶೆಟ್ಟಿ ಸ್ವಾಗತಿಸಿ ತಮ್ಮ ಅಧಿಕಾರವಧಿಯಲ್ಲಿ ಸಹಕರಿಸಿದ ಸರ್ವ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ನಿರ್ಗಮನ ಕಾರ್ಯದರ್ಶಿ ಡಾ. ಅನಿತಾ ರವಿಶಂಕರ್ ವಾರ್ಷಿಕ ವರದಿ ಮಂಡಿಸಿದರು. ನೂತನ ಅಧ್ಯಕ್ಷೆ ಡಾ. ಅನಿತಾ ರವಿಶಂಕರ್ ತಮ್ಮ ಅಧಿಕಾರವಧಿಯಲ್ಲಿ ಕೈಗೊಳ್ಳಲಾಗುವ ಕಾರ್ಯಯೋಜನೆಗಳ ಬಗ್ಗೆ ವಿವರಿಸಿದರು.
ತಪಸ್ಯ ರಾವ್ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಲತಾ ವಿಕ್ರಮ್ ವಂದಿಸಿದರು.
ಪದಾಧಿಕಾರಿಗಳ ವಿವರ: ಉಪಾಧ್ಯಕ್ಷೆ ಪ್ರಫುಲ್ಲಾ ರೈ, ಚುನಾಯಿತ ಅಧ್ಯಕ್ಷ ಡಾ. ಅನಂತನ್, ದಂಡಾಧಿಕಾರಿ ಸಂಗೀತಾ ಅನಂತನ್, ಕೋಶಾಧಿಕಾರಿ ಜಯಪ್ರಕಾಶ್ ರೈ.
ನಿರ್ದೇಶಕರು: ಸಂಸ್ಥೆ ಸೇವೆ - ರಾಜೀವಿ, ವೃತ್ತಿಪರ ಸೇವೆ - ವಾಣಿ ಲೋಕಯ್ಯ, ಸಮುದಾಯ ಸೇವೆ -ಪ್ರಭಾಕರ್ ರೈ, ಅಂತರ್‌ರಾಷ್ಟ್ರೀಯ ಸೇವೆ- ರವೀಂದ್ರ ಶೆಟ್ಟಿ, ಯುವಜನ ಸೇವೆ -ಚಂದ್ರು ಹೆಗ್ಡೆ







