ಪತ್ರಕರ್ತ ರೇಮಂಡ್ ಡಿಕುನ್ಹಾ ತಾಕೊಡೆ ಕೃತಿ ಟೀಟೋಟ್ಲರ್ಸ್ ಬಿಡುಗಡೆ

ಮಂಗಳೂರು: ಹಿರಿಯ ಪತ್ರಕರ್ತ, ಬಹುಭಾಷಾ ಸಾಹಿತಿ ರೇಮಂಡ್ ಡಿಕುನ್ಹಾ ತಾಕೊಡೆ ಅವರ ಜೀವನ ಚರಿತ್ರೆಯ ಕೃತಿ ‘ಟೀಟೋಟ್ಲರ್ಸ್’ ಶುಕ್ರವಾರ ಬಿಡುಗಡೆಗೊಂಡಿತು.
ಮಂಗಳೂರು ಕೆಥೋಲಿಕ್ ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನಾ ಕೃತಿಯನ್ನು ಬಿಡುಗಡೆಗೊಳಿಸಿ, ಕೃತಿಯಲ್ಲಿರುವ ವಿಚಾರಗಳ ವಿವರಿಸಿ ರೇಮಂಡ್ ಡಿಕುನ್ಹಾ ತಾಕೊಡೆ ಅವರ ಸಾಧನೆಯನ್ನು ಶ್ಲಾಘಿಸಿದರು.
ಮೂಡುಬಿದಿರೆ ಪದ್ಮಶ್ರೀ ಗ್ಯಾಸ್ ಏಜೆನ್ಸಿಯ ಪ್ರಬಂದಕ ಆಲ್ಬರ್ಟ್ ಡಿಅಲ್ಮೇಡಾ ಶುಭ ಹಾರೈಸಿದರು.
ರೇಮಂಡ್ ಡಿಕೂನಾ ತಾಕೊಡೆ ಮಾತನಾಡಿ, ಸಾಹಿತಿಗಳು ಮಾತನಾಡುವ ಅಗತ್ಯ ಇಲ್ಲ ಅವರ ಪುಸ್ತಕ ಮಾತನಾಡುತ್ತದೆ. ಸಾಹಿತಿಗಳು ತೆಂಗಿನ ಮರದಂತೆ. ಅಡ್ಡ ಏನು ಬಂದರೂ ಆಕಾಶದೆಡೆಗೆ ಬೆಳೆಯು ವುದು ಬಿಡುವುದಿಲ್ಲ ಮತ್ತು ಫಲ ಕೊಡುವುದು ನಿಲ್ಲಿಸುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಐಸಿವೈಎಂ ಮಂಗಳೂರು ಘಟಕದ ನೂತನ ಅಧ್ಯಕ್ಷ ವಿಜಯ್ ಕಾರ್ಡೋಜಾ , ಮಾಂಡ್ ಸೊಭಾಣ್ ಅಧ್ಯಕ್ಷ ಲೂವಿಸ್ ಜೆ. ಪಿಂಟೊ, ಸೈಂಟ್ ಆನ್ಸ್ ಪ್ರಯರಿ ಸುಪೀರಿಯರ್ ಫಾ. ಜೆರಾಲ್ಡ್ ಲೋಬೋ, ಕೆಎನ್‌ಎಸ್‌ನ ನಿಯೋಜಿತ ಅಧ್ಯಕ್ಷ ಫಾ. ರೋಕಿ ಡಿಕುನಾ , ಹಿರಿಯ ಕೊಂಕಣಿ ಲೇಖಕ ನವೀನ್ ಕುಲ್ಶೇಕರ್, ವಕೀಲರಾದ ಶಾಲೆಟ್ ಪಿಂಟೊ ಮತ್ತು ಸಾಹಿತಿ ಜೋಸ್ಸಿ ಪಿಂಟೊ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮಾಜಿ ಬಿಷಪ್ ಅತೀ ವಂದನೀಯ ಡಾ. ಅಲೋಶಿಯಸ್ ಪೌಲ್ ಡಿ ಸೋಜ ಬಲಿಪೂಜೆಯನ್ನು ನೆರವೇರಿಸಿದರು. ಫಾ. ಜೆರಾಲ್ಡ್ ಲೋಬೊ, ಫಾ. ಮ್ಯಾಕ್ಸಿಮ್ ರೊಸಾರಿಯೊ ಮತ್ತು ಫಾ. ಫೆಲಿಕ್ಸ್ ಮೊಂತೆರೊ ಜೊತೆಯಾಗಿ ಪವಿತ್ರ ಆಚರಣೆಯನ್ನು ಸದ್ಭಕ್ತಿಯಿಂದ ನಡೆಸಿದರು.
ರಿಯಾನ ಡಿ ಕುನ್ಹಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಎಲಿಯಸ್ ಫೆರ್ನಾಂಡಿಸ್ ವಂದಿಸಿದರು.
ನತಾಲಿಯಾ ಡಿಕುನ್ಹಾ , ಲೋನಾ ವಾಸ್, ಕೆ. ವಸಂತ್ ರಾವ್, ಅಶ್ಲಿನ್, ನಿಹಾನ್, ವಿಲ್ಸನ್, ನೆಲ್ಸನ್, ಅವಿತ್, ವಿನೋಯ್ ಹಾಗೂ ವಿರೋಯ್ ಉಪಸ್ಥಿತರಿದ್ದರು.







