ಮಂಗಳೂರು: ಬೀದಿ ನಾಟಕದಿಂದ ಜನಜಾಗೃತಿ ಕಾರ್ಯಕ್ರಮ

ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನೈರ್ಮಲ್ಯವನ್ನು ಉತ್ತೇಜಿಸಲು ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲು ನಗರದ ಸಂತ ಅಲೋಶಿಯಸ್ ಗೊನ್ಜಾಗ ಶಾಲೆಯ 9 ಮತ್ತು 10ನೇ ತರಗತಿಗಳ ಇಕೋ ಕ್ಲಬ್ ವಿದ್ಯಾರ್ಥಿಗಳು ಶನಿವಾರ ಬಿಜೈನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸ್ವಚ್ಛ ಬಸ್ ನಿಲ್ದಾಣ, ಸ್ವಸ್ಥ ಜೀವನ್ ಎಂಬ ಬೀದಿ ನಾಟಕವನ್ನು ಪ್ರದರ್ಶಿಸಿದರು.
ಈ ಪ್ರದರ್ಶನ ಪ್ರಯಾಣಿಕರು, ಬಸ್ ಸಿಬ್ಬಂದಿ ಮತ್ತು ದಾರಿಹೋಕರ ಗಮನ ಸೆಳೆಯಿತು.
ಶಾಲೆಯ ಪ್ರಿನ್ಸಿಪಾಲ್ ಫಾ.ರೋಹನ್ ಡಿ ಅಲ್ಮೇಡಾ ಎಸ್‌ಜೆ ಮಾತನಾಡಿ, ಪರಿಸರ ಉಳಿಸುವ ಕೆಲಸ ಎಲ್ಲರಿಂದಲ್ಲೂ ಆಗಬೇಕು. ಪರಿಸರಕ್ಕೆ ನಾವು ಏನನ್ನೂ ನಿಡುತ್ತೇವೆಯೋ ಅದು ಮರಳಿ ನಮಗೆ ನೀಡುತ್ತದೆ. ಪರಿಸರಕ್ಕೆ ಒಳ್ಳೆಯದ್ದನ್ನೇ ಕೊಡೋಣ ಎಂದರು.
ಈ ಸಂದರ್ಭ ಹಿರಿಯ ವಿಭಾಗೀಯ ನಿಯಂತ್ರಕ ರಾಜೇಶ್ ಶೆಟ್ಟಿ ಮತ್ತು ಡಿಪೋ ವ್ಯವಸ್ಥಾಪಕ ಶಿವರಾಮ್ ನಾಯಕ್, ಶಿಕ್ಷಕರಾದ ದೀಪಾ ಕರ್ಕಡ, ಶಿಲ್ಪಾ ಬಲ್ಲಾಳ್, ಲಾವಣ್ಯ ಶೆಟ್ಟಿ ಮತ್ತು ವಿಜಯಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದರು.
ಸಂತ ಅಲೋಶಿಯಸ್ ಗೊನ್ಜಾಗ ಶಾಲೆಯ ಪ್ರಿನ್ಸಿಪಾಲ್ ಫಾ.ರೋಹನ್ ಡಿ ಅಲ್ಮೇಡಾ ಎಸ್.ಜೆ . ಪರಿಸರದ ಕುರಿತು ಜಾಗೃತಿಯ ಸಂದೇಶ ನೀಡಿದರು.







