ಉಳ್ಳಾಲ: ಕೂರತ್ ತಂಙಳ್ ಆಂಡ್ ನೇರ್ಚೆ

ಉಳ್ಳಾಲ: ಕೇಂದ್ರ ಜುಮಾ ಮಸೀದಿ ಹಾಗೂ ಸೈಯದ್ ಮದನಿ ದರ್ಗಾ ಸಮಿತಿಯ ಆಶ್ರಯದಲ್ಲಿ ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅವರ ಆಂಡ್ ನೇರ್ಚೆ ಕಾರ್ಯಕ್ರಮವು ರವಿವಾರ ಕೇಂದ್ರ ಜುಮಾ ಮಸೀದಿಯಲ್ಲಿ ನಡೆಯಿತು .
ಉಡುಪಿ ಸಂಯುಕ್ತ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ದುಆ ನೆರವೇರಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಮಾತನಾಡಿ, ಮರಣ ಹೊಂದಿದವರ ಒಳ್ಳೆಯ ಕಾರ್ಯ ಮಾತ್ರ ನೆನಪಿಡಬೇಕು ಎಂದು ಇಸ್ಲಾಮ್ ಸಾರಿದೆ. ವಿದ್ಯಾರ್ಥಿಗಳು ಬಹಳಷ್ಟು ಆಸಕ್ತಿ ಯಿಂದ ಶಿಕ್ಷಣ ಪಡೆಯಬೇಕು. ಶಿಕ್ಷಣದಿಂದ ಮಾತ್ರ ಜೀವನ ಯಶಸ್ಸು ಸಾಧ್ಯ ಎಂದು ಕರೆ ನೀಡಿದರು.
ಅಬ್ದುಲ್ಲತೀಫ್ ಸಖಾಫಿ ಮದನೀಯಂ ಧಾರ್ಮಿಕ ಉಪನ್ಯಾಸ ನೀಡಿದರು.
ಬಿ.ಜಿ.ಹನೀಫ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸೈಯದ್ ಜಲಾಲುದ್ದೀನ್ ಅಲ್ ಹಾದಿ ತಂಙಳ್ ಉಜಿರೆ ಸಮಾರೋಪ ದುಆ ಮಾಡಿದರು.
ಕಾರ್ಯಕ್ರಮದಲ್ಲಿ ಸೈಯದ್ ಅಖ್ತರ್ ಹುಸೈನ್ ಚಿಸ್ತಿ ವಿಜಯಪುರ, ಪಟ್ಲ ಮಸೀದಿಯ ಖತೀಬ್ ಮುಹಮ್ಮದ್ ಫೈಝಿ, ಕೋಡಿ ಜುಮಾ ಮಸೀದಿಯ ಖತೀಬ್ ಆದಂ ಫೈಝಿ, ಹುಸೈನ್ ಸಅದಿ ಮುಫತ್ತಿಷ್, ಸೈಯದ್ ಖುಬೈಬ್ ತಂಙಳ್, ಕೇಂದ್ರ ಜುಮಾ ಮಸೀದಿ ಖತೀಬ್ ಅಬ್ದುಲ್ ಮಜೀದ್ ಫಾಳಿಲಿ ಕಾಮಿಲ್ ಸಖಾಫಿ, ಐಸಂ ಶಾಕಿರ್ ಹಾಜಿ, ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಅರಬಿಕ್ ಕಾಲೇಜು ಪ್ರೊಫೆಸರ್ ಇಬ್ರಾಹೀಂ ಅಹ್ಸನಿ, ನೌಮಾನ್ ನೂರಾನಿ ನಝೀಮ್ ನೂರಾನಿ
ಫಾರೂಕ್ ಅಬ್ಬಾಸ್ ಹಾಜಿ ಕೋಟೆಪುರ ಮತ್ತಿತರರು ಉಪಸ್ಥಿತರಿದ್ದರು.
ಪ್ರದಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.







