ಶಕ್ತಿ ಯೋಜನೆ ರಾಜ್ಯ ಸರ್ಕಾರದ ಯಶಸ್ವಿ ಯೋಜನೆ: ಸ್ಪೀಕರ್ ಯು.ಟಿ.ಖಾದರ್

ಕೊಣಾಜೆ: ರಾಜ್ಯ ಸರಕಾರದ ಪಂಚ ಗ್ಯಾರೆಂಟಿ ಯೋಜನೆಯಲ್ಲಿ 500 ಕೋಟಿ ಮಹಿಳೆಯರು ಉಚಿತ ವಾಗಿ ರಾಜ್ಯ, ಜಿಲ್ಲೆ, ವಿವಿಧ ಪ್ರದೇಶಗಳಲ್ಲಿ ಸಂಚರಿಸಿದ್ದಾರೆ, ಇದರಿಂದಾಗಿ ಆರ್ಥಿಕ ಚಲನವಲನಗಳು ಹೆಚ್ಚಾಗಿದೆ, 500 ಕೋಟಿ ಮಹಿಳೆಯರಲ್ಲಿ 500 ಕೋಟಿ ಫಲಾನುಭವಿಗಳು ಬಡವರಾಗಿದ್ದು ಅವರಿಗೆ ಪರೋಕ್ಷವಾಗಿ ಶಕ್ತಿ ನೀಡುವ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿರುವು ನಮಗೆ ಗೌರವ ಮತ್ತು ಹೆಮ್ಮೆಯ ವಿಚಾರವಾಗಿದೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಜನರಿಗೆ ಇದರ ಪ್ರಯೋಜನ ಸಿಗಲಿ ಎಂದು ವಿಧಾನಸಭಾ ಅಧ್ಯಕ್ಷರಾದ ಯು.ಟಿ.ಖಾದರ್ ಅವರು ಹೇಳಿದರು.
ಮಂಗಳೂರು ವಿಧಾನ ಸಭಾ ಕ್ಷೇತ್ರದ ಪಂಚ ಗ್ಯಾರೆಂಟಿ ಉಳ್ಳಾಲ ಸಮಿತಿಯ ನೇತೃತ್ವದಲ್ಲಿ ಶಕ್ತಿ ಯೋಜನೆಯಡಿಯಲ್ಲಿ 500ಕೋಟಿ ಉಚಿತ ಪ್ರಯಾಣ ನನಸಾದ ಹಿನ್ನೆಲೆಯಲ್ಲಿ ಪಜೀರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಜೀರ್ ಜಂಕ್ಷನ್ ನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸಿಗೆ ಮಹಿಳೆಯರು ಆರತಿ ಬೆಳಗಿಸಿ ನಡೆಸಿದ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಬಸ್ಸಿನ ಚಾಲಕ ಹಸನ್ ಮತ್ತು ನಿರ್ವಾಹಕ ಮೌಲಾನಾ ಸಾಬ್ ಅವರನ್ನು ಸನ್ಮಾನಿಸಲಾಯಿತು.
ಪಂಚ ಗ್ಯಾರೆಂಟಿ ಅನುಷ್ಠಾನ ಉಳ್ಲಾಲ ಸಮಿತಿ ಅಧ್ಯಕ್ಷ ರಫೀಕ್ ಅಂಬ್ಲಮೊಗರು, ಪಂಚ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಸುರೇಖಾ ಚಂದ್ರಹಾಸ್, ಪಜೀರ್ ಗ್ರಾಮ ಪಂಚಾಯತ್ ಅಧ್ಯಕ್ಷ ರಫೀಕ್ ಪಜೀರ್, ಅಂಬ್ಲಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷ ಇಕ್ಬಾಲ್ ಅಂಬ್ಲಮೊಗರು, ತಾಲೂಕು ಪಂಚಾಯತ್ ಮಾಜಿ ಸದಸ್ಯ ಮುಸ್ತಫ ಹರೇಕಳ, ಜಬ್ಬಾರ್ ಬೋಳಿಯಾರ್, ಪದ್ಮಾವತಿ ಪೂಜಾರಿ, ಪಜೀರ್ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸೀತಾರಾಮ ಶೆಟ್ಟಿ, ಉಳ್ಳಾಲ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಿಕಾ ರೈ, ಜಸಿಂತಾ ಮೆಂಡೋಂಸ, ಮಂಗಳೂರು ಯುನಿವರ್ಸಿಟಿ ಸಿಂಡಿಕೇಟ್ ಸದಸ್ಯ ಅಚ್ಚುತ ಗಟ್ಟಿ, ರಾಜ್ಯ ವಕ್ಫ್ ಸಲಹಾ ಸಮಿತಿಯ ಅಬ್ದುಲ್ ರಹ್ಮಾನ್ ಕೋಡಿಜಾಲ್, ರಝಿಯಾ ಇಬ್ರಾಹಿಮ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎ.ಕೆ ರಹ್ಮಾನ್ ಕೋಡಿಜಾಲ್, ಪ್ರಮುಖರಾದ ಮೊಯಿದಿನ್ ಪಜೀರ್, ಸಮೀರ್ ಪಜೀರ್, ಬದ್ರುದ್ದೀನ್ ಹರೇಕಳ,ಲತಾ ತಲಪಾಡಿ, ರೇವತಿ ಕುಂಪಲ, ರಹ್ಮಾನ್ ಚಂದಹಿತ್ಲು, ಇಸ್ಮಾಯಿಲ್ ನಾಟೆಕಲ್ ಮೊದಲಾದವರು ಉಪಸ್ಥಿತರಿದ್ದರು.







