ಕಣಚೂರು ಇಸ್ಲಾಮಿಕ್ ಎಜ್ಯುಕೇಷನ್ ಟ್ರಸ್ಟ್ ಸ್ಥಾಪಕರ ದಿನಾಚರಣೆ

ಕೊಣಾಜೆ: ಕಣಚೂರು ಇಸ್ಲಾಮಿಕ್ ಎಜ್ಯುಕೇಷನ್ ಟ್ರಸ್ಟ್ ಇದರ ಸ್ಥಾಪಕರ ದಿನಾಚರಣೆಯು ನಾಟೆಕಲ್ ಕಣಚೂರು ವೈದ್ಯಕೀಯ ಕಾಲೇಜಿನ ಕಾನ್ಪೆರೆನ್ಸ್ ಸಭಾಂಗಣದಲ್ಲಿ ಸೋಮವಾರದಂದು ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಧಾರವಾಡ ವಿಶ್ವವಿದ್ಯಾಲಯ ದ ಉಪಕುಲಪತಿ ಡಾ. ಎ.ಎಂ. ಖಾನ್ ಭಾಗವಹಿಸಿ ಮಾತನಾಡಿ, ಕಣಚೂರು ಸಂಸ್ಥೆ ಸ್ಥಾಪಕರು ಯು. ಕಣಚೂರು ಮೋನು ಸರಳ ವ್ಯಕ್ತಿತ್ವದವರಲ್ಲ. ತಮ್ಮ ಅಪಾರ ಶ್ರಮ, ದೃಢ ಸಂಕಲ್ಪ ಮತ್ತು ದೀರ್ಘ ದೃಷ್ಟಿಯಿಂದ ಇಂದು ಎಲ್ಲರಿಗೂ ಪ್ರೇರಣೆಯಾಗಿರುವ ವ್ಯಕ್ತಿ. ಕಣಚೂರು ಮೋನು ಅವರು ಕಠಿಣ ಪರಿಶ್ರಮದಿಂದ ಯಶಸ್ವಿ ಯನ್ನು ಪಡೆದವರು. ಈ ಭಾಗದ ಯಾರೂ ಕೂಡ ಶಿಕ್ಷಣ ದಿಂದ ವಂಚಿತರಾಗಬಾರದು ಎಂಬ ದೃಷ್ಟಿ ಯಿಂದ ಮೊದಲಿಗೆ ಕಣಚೂರು ಶಾಲೆಯನ್ನು ಆರಂಭಿಸಿ ಇವತ್ತಿಗೆ ವೈದ್ಯಕೀಯ ಕಾಲೇಜು ಸ್ಥಾಪಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರ ಆದರ್ಶ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಕವಾಗಿದೆ ಎಂದರು.
ಕಠಿಣ ಪರಿಶ್ರಮ ಹಾಗೂ ನಿರಂತರ ಕಲಿಕೆಯಿಂದ ಸಾಧನೆಯ ಶಿಖರವನ್ನು ಏರಬಹುದು. ಇಂತಹ ಅವರ ಹೋರಾಟದ ಬದುಕಿಗೆ ಭಾರತ ರತ್ನ ವೂ ಲಭಿಸಲಿ. ಈ ಮೂಲಕ ಪರಿಶ್ರಮದ ದಾರಿಗೆ ಕೊಡುವ ಗೌರವ ವಾಗುತ್ತದೆ. ಎಲ್ಲರೂ ಕಷ್ಟ ಪಟ್ಟು ಕಲಿತು ತಮ್ಮ ಶಾಲೆಗೆ ಅವಾ ವಿದ್ಯಾ ಸಂಸ್ಥೆಗೆ ಹೆಸರನ್ನು ತಂದು ಕೊಡುವ ಕೆಲಸ ಮಾಡಬೇಕು. ವಿದ್ಯಾರ್ಥಿಗಳಂತೆ ಮೌಲ್ಯಯುತ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸನದಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ. ಈ ಮೂಲಕ ಕಲಿತ ವಿದ್ಯಾಸಂಸ್ಥೆಗಳಿಗೆ ಕೀರ್ತಿಯನ್ನು ತರುವ ಕೆಲಸ ಪ್ರತಿಯೊಂದು ಶಿಕ್ಷಕರೂ ಹಾಗೂ ವಿದ್ಯಾರ್ಥಿಗಳು ಮಾಡಬೇಕು ಎಂದರು.
ಕಣಚೂರು ಇಸ್ಲಾಮಿಕ್ ಎಜ್ಯುಕೇಷನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಯು.ಕೆ.ಮೋನು ಮಾತನಾಡಿ ಕಷ್ಟದ ದಿನಗಳನ್ನು ಕಳೆದು , ಬಡತನದಲ್ಲಿನ ಜೀವನದಲ್ಲಿ ಅಕ್ಕಿಗೂ ಪರದಾಡಿದ ದಿನಗಳಿತ್ತು. ಬ್ರಿಟೀಷ್ ಸರಕಾರದ ಉದ್ಯೋಗಿಯಾಗಿದ್ದ ತಂದೆ, ತಾಯಿ ಕುಟುಂಬಕ್ಕೆ ಜಮೀನಿದ್ದರೂ ಒಕ್ಕಲು ಮನೆಯವರ ಆಶ್ರಯವಿದ್ದಲ್ಲಿ ಮಾತ್ರ ಅಕ್ಕಿ ಸಿಗುವ ಕಾಲವದು. ಹಣವಿದ್ದರೂ ಅಕ್ಕಿ ಸಿಗದೇ ಪರದಾಡಿದ್ದೆವು. ಹಣವಿದ್ದರೂ ಹೆತ್ತವರನ್ನು ಹಜ್ ಯಾತ್ರೆಗೆ ಕಳುಹಿಸಲು ಸಾಧ್ಯವಾಗಲಿಲ್ಲ ಅನ್ನುವ ದು:ಖ ಸದಾ ಇರುತ್ತದೆ. ಪರಿಶ್ರಮಿಗಳಾಗಿ ಸುಖ ಇದ್ದೇ ಇರುವುದು. ಹುಟ್ಟಿದ ದಿನವನ್ನು ಹಿಂದಿನಿಂದಲೂ ಆಚರಿಸಿದವನಲ್ಲ. ಅಭಿಮಾನದಿಂದ ಹಾಕಿರುವ ನಾಮಫಲಕಗಳಿಗೆ ಗದರಿಸುವಂತಿಲ್ಲ. ಸಂಸ್ಥೆ ಮುಂದೆ ನಿರಂತರ ಸ್ಥಾಪನಾ ದಿನ ಆಚರಣೆಗಳನ್ನು ನಡೆಸುತ್ತಾ ಇರುವ ಆಶಯದೊಂದಿಗೆ ಆಚರಿಸಲಾಗಿದೆ ಎಂದರು.
ಕಣಚೂರು ವೈದ್ಯಕೀಯ ಕಾಲೇಜಿನ ನಿರ್ದೇಶಕ ಅಬ್ದುಲ್ ರಹಿಮಾನ್, ಕಣಚೂರು ಇಸ್ಲಾಮಿಕ್ ಎಜುಕೇಷನ್ ಟ್ರಸ್ಟ್ ನ ಟ್ರಸ್ಟಿ ಜೊಹಾರ ಮೋನು, ಟ್ರಸ್ಟಿ ಉಮಾಯ ಬಾನು ಆರೀಫ್, ಫರೀದ ನಸೀರ್, ಸಹಾದ ರಹಿಮಾನ್, ಡಾ. ಅಬಿದ ಹಸೀಮ್ , ಅಬ್ದಲ್ ರೆಹಿಮಾನ್, ಕ್ಯಾಲಿಕಟ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎಂ. ಅಬ್ದುಲ್ ರೆಹಿಮಾನ್,ಕಣಚೂರು ಹೆಲ್ತ್ ಸೈನ್ಸ್ ಸಲಹಾ ಮಂಡಳಿಯ ಚೆರ್ ಮಾನ್ ಡಾ.ಮೊಹಮ್ಮದ್ ಇಸ್ಮಾಯಿಲ್ ಹೆಜಮಾಡಿ, ಕಣಚೂರು ಹೆಲ್ತ್ ಸೈನ್ಸ್ ಸಲಹಾ ಮಂಡಳಿಯ ಸದಸ್ಯ ಪ್ರೊ.ವೆಂಕಟರಾಯ್ ಪ್ರಭು ಉಪಸ್ಥಿತರಿದ್ದರು.
ಕಣಚೂರು ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ಡಾ.ರೋಹನ್ ಮೋನಿಸ್ ಸನ್ಮಾನಿತರ ವಿವರ ನೀಡಿದರು. ಕಣಚೂರು ಆಸ್ಪತ್ರೆಯ ಫಿಸಿಯೋಥೆರಫಿ ವಿಭಾಗದ ಪ್ರಾಂಶುಪಾಲ ಡಾ.ಸುಹೇಲ್ ಸ್ವಾಗತಿಸಿದರು.
ಕಣಚೂರು ಅಲೈಡ್ ಸೈನ್ಸ್ ನ ಅಸಿಸ್ಟೆಂಟ್ ಪ್ರೊ. ಪ್ರತಿಕ್ಷಾ ಶೆಟ್ಟಿ , ಪಬ್ಲಿಕ್ ಶಾಲೆಯ ಟಿಜಿಟಿ ಸೌಮ್ಯ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಕಣಚೂರು ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ. ಮೊನಿಸ್ ಸಲ್ಡಾನ ವಂದಿಸಿದರು.







