ಎಸ್ಕೆಎಸೆಸ್ಸೆಫ್ ಕರ್ನಾಟಕ ದುಬೈ ಸಮಿತಿಯ ವಾರ್ಷಿಕ ಸಭೆ

ಮಂಗಳೂರು, ಜು.14: ಎಸ್ಕೆಎಸೆಸ್ಸೆಫ್ ಕರ್ನಾಟಕ ದುಬೈ ಸಮಿತಿಯ ವಾರ್ಷಿಕ ಮಹಾಸಭೆ, ಮಾಸಿಕ ಸ್ವಲಾತ್ ಮಜ್ಲಿಸ್, ಮರ್ಹೂಂ ಶೈಖುನಾ ಮಾನಿಯೂರ್ ಉಸ್ತಾದ್ ಅನುಸ್ಮರಣಾ ಕಾರ್ಯಕ್ರಮ ರವಿವಾರ ದುಬೈ ಅಬೂಹೈಲ್ ಕೆಎಂಸಿಸಿ ಹಾಲ್‌ನಲ್ಲಿ ನಡೆಯಿತು. ಬದ್ರುಲ್ ಮುನೀರ್ ಫೈಝಿ ಸ್ವಲಾತ್ ಮಜ್ಲಿಸ್‌ನ ನೇತೃತ್ವ ವಹಿಸಿದ್ದರು. ಸಮಸ್ತ ಮುಶಾವರ ಸದಸ್ಯರಾಗಿದ್ದ ಮರ್ಹೂಂ ಶೈಖುನಾ ಮಾನಿಯೂರ್ ಉಸ್ತಾದ್‌ರ ಬಗ್ಗೆ ಸಿರಾಜುದ್ದೀನ್ ಫೈಝಿ ಮಾತನಾಡಿದರು.
ಅಧ್ಯಕ್ಷ ಅಲಿ ಹಸನ್ ಫೈಝಿಯ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯನ್ನು ಎಸ್ಕೆಎಸೆಸ್ಸೆಫ್ ಯುಎಇ ಸಮಿತಿಯ ಅಧ್ಯಕ್ಷ ಸೈಯ್ಯದ್ ಅಸ್ಕರಲಿ ತಂಳ್ ದುಅ ಮೂಲಕ ಉದ್ಘಾಟಿಸಿದರು. ಮುಸ್ತಫಾ ದಾರಿಮಿ ಮಲಾರ್ ಖಿರಾಅತ್ ಪಠಿಸಿದರು. ಪ್ರಧಾನ ಕಾರ್ಯದರ್ಶಿ ತಮೀಮ್ ಸಿ.ಕೆ. ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿದರು.
2025-27ನೆ ಸಾಲಿನ ಅಧ್ಯಕ್ಷರಾಗಿ ಅಲಿ ಹಸನ್ ಫೈಝಿ, ಪ್ರಧಾನ ಕಾರ್ಯದರ್ಶಿಯಾಗಿ ತಮೀಮ್ ಸಿ.ಕೆ., ಕೋಶಾಧಿಕಾರಿಯಾಗಿ ಅನ್ವರ್ ಮಾಣಿಲ, ವರ್ಕಿಂಗ್ ಕಾರ್ಯದರ್ಶಿಯಾಗಿ ನವಾಝ್ ಕಟ್ಟತ್ತಾರು, ಉಪಾಧ್ಯಕ್ಷರಾಗಿ ಅಬ್ದುಲ್ಲ ನಈಮಿ, ಇಬ್ರಾಹೀಂ ಆತೂರು, ಬದ್ರುಲ್ ಮುನೀರ್ ಫೈಝಿ, ನವಾಝ್ ಬಿ.ಸಿ. ರೋಡು, ಜೊತೆ ಕಾರ್ಯದರ್ಶಿಯಾಗಿ ಶಾರೂಕ್ ಬಿ.ಸಿ. ರೋಡ್, ಮುಸ್ತಫಾ ದಾರಿಮಿ ಮಲಾರ್, ಶಾಹುಲ್ ಬಿ.ಸಿ. ರೋಡ್, ಅಬ್ದುಲ್ ನಾಸಿರ್ ಬಪ್ಪಳಿಗೆ, ಸಂಘಟನಾ ಕಾರ್ಯದರ್ಶಿಯಾಗಿ ಜೌಹರ್ ಉರುಮನೆ, ಕೌನ್ಸಿಲ್ ಸದಸ್ಯರಾಗಿ ಬದ್ರುದ್ದೀನ್ ಹೆಂತಾರ್, ಹಾಜಿ ಅಲಿ ಹೈದರ್ ಈಶ್ವರಮಂಗಳ, ಅಶ್ರಫ್ ಅರ್ತಿಕೆರೆ, ಮುಸ್ತಫಾ ದಾರಿಮಿ ಮಲಾರ್, ಅಬ್ದುಲ್ಲ ನಈಮಿ ಹಾಜಿ, ಶರೀಫ್ ಕಾವು, ಅಬ್ದುಲ್ ಸಲಾಂ ಬಪ್ಪಳಿಗೆ, ಜಾಬಿರ್ ಬೆಟ್ಟಂಪಾಡಿ, ರಫೀಕ್ ಕಂಬಳಬೆಟ್ಟು, ಇಬ್ರಾಹೀಂ ಅಬೂಬಕ್ಕರ್ ಆತೂರು, ಅಝರ್ ಹಂಡೇಲ್, ಅಕ್ಬರ್ ಹಂಡೇಲ್, ತಬ್ಶೀರ್ ಕಡಬ, ಶಾಹುಲ್ ಬಿ.ಸಿ ರೋಡ್, ಶಾರೂಖ್ ಬಿಸಿ.ರೋಡು, ಸಿರಾಜ್ ಬಿ.ಸಿ ರೋಡು, ಇಶಾಕ್ ಕುಡ್ತಮೊಗರು, ಇಫ್ತಿಕಾರ್ ಅಡ್ಯಾರ್ ಕಣ್ಣೂರು, ನವಾಝ್ ಬಿ.ಸಿ. ರೋಡು, ಜೌಹರ್ ಉರುಮನೆ, ಜಲೀಲ್ ಶಾನ್, ಅಝೀಝ್ ಸೋಂಪಾಡಿ, ಇಸ್ಮಾಯೀಲ್ ತಿಂಗಳಾಡಿ, ಮುಹಮ್ಮದ್ ಪಳ್ಳತ್ತೂರು, ಮುಹಮ್ಮದ್ ರೆಡ್ ಟಾಗ್, ಬದ್ರುಲ್ ಮುನೀರ್ ಫೈಝಿ ಆಯ್ಕೆಯಾದರು. ಚುನಾವಣಾ ಅಧಿಕಾರಿಗಳಾಗಿ ಯಹ್ಯಾ ಕೊಡ್ಲಿಪೇಟೆ, ಶರೀಫ್ ಕೊಡ್ನೀರ್ ಕಾರ್ಯನಿರ್ವಹಿಸಿದರು.







