ಮಂಗಳೂರು| ಅಡ್ಯಾರ್ ಕಟ್ಟೆ ಬಳಿ ರಸ್ತೆ ಅಪಘಾತ: ಗಾಯಗೊಂಡಿದ್ದ ಯುವಕ ಮೃತ್ಯು

ಮಂಗಳೂರು, ಜು.14: ನಗರದ ಅಡ್ಯಾರ್‌ಕಟ್ಟೆ ಬಳಿ ರವಿವಾರ ತಡರಾತ್ರಿ ನಡೆದ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯೂಸೂಫ್ ಅರ್ಪಾಝ್ (25) ಎಂಬವರು ಮೃತಪಟ್ಟ ಘಟನೆ ನಡೆದಿದೆ.
ಹೊಸದಿಲ್ಲಿಗೆ ಕೆಲಸದ ನಿಮಿತ್ತ ತೆರಳಿದ್ದ ಮೌಸೂಕ್ ಎಂಬಾತ ಜು.13ರಂದು ರಾತ್ರಿ ರೈಲಿನಲ್ಲಿ ಮಂಗಳೂರಿಗೆ ಬಂದಿದ್ದು, ಆತನನ್ನು ಆದಿಲ್ ಎಂಬಾತನ ಕಾರಿನಲ್ಲಿ ಯೂಸೂಫ್ ಅರ್ಪಾಝ್, ಮೌಸೂಕ್, ಬಿ.ಎಂ. ಅಬ್ದುಲ್ ಎಂಬವರು ಊರಿಗೆ ಕರೆದುಕೊಂಡು ಹೋಗುತ್ತಿದ್ದಾಗ ಅಡ್ಯಾರ್ ಕಟ್ಟೆಯ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿತ್ತು. ಈ ಸಂದರ್ಭ ಸೀಟಿನ ಹಿಂಬದಿಯಿದ್ದ ಮೂವರು ರಸ್ತೆಗೆಸೆಯಲ್ಪ ಟ್ಟರು. ಆ ಪೈಕಿ ಗಂಭೀರ ಗಾಯಗೊಂಡ ಯೂಸೂಫ್ ಅರ್ಪಾಝ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿ ದ್ದಾರೆ. ಚಾಲಕ ಆದಿಲ್ ಸೀಟ್ ಬೆಲ್ಟ್ ಹಾಕಿದ ಕಾರಣ ಗಾಯ-ಅಪಾಯದಿಂದ ಪಾರಾಗಿದ್ದಾರೆ.
ಈ ಬಗ್ಗೆ ಸಂಚಾರ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





