ಪರ್ಲಿಯ: ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ

ಬಿ.ಸಿ.ರೋಡ್, ಜು.15: ಜಮಾಅತೆ ಇಸ್ಲಾಮಿ ಹಿಂದ್ ಬಿ.ಸಿ.ರೋಡ್ ಇದರ ವತಿಯಿಂದ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಇದರ ಪ್ರಮಾಣ ಪತ್ರ ಮತ್ತು ಸ್ಮರಣಿಕೆ ವಿತರಣೆ ಹಾಗೂ ಪರ್ಲಿಯಾದ ಝಿಯಾವುಲ್ ಇಸ್ಲಾಂ ಮದ್ರಸದ ವಾರ್ಷಿಕೋತ್ಸವ ಕಾರ್ಯಕ್ರಮ ಜು.13ರಂದು ಜರುಗಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೋರ್ಡ್ ನ ರಾಜ್ಯ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ್ ಬೋರ್ಡ್ ಆಫ್ ಇಸ್ಲಾಮಿಕ್ ನ ಪರಿಚಯ ಮತ್ತು ಅದರ ಸಾಧನೆ, ಇಸ್ಲಾಮಿ ಶಿಕ್ಷಣದ ಅಗತ್ಯ ಮುಂತಾದ ವಿಷಯಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸುಮಾರು 70 ವಿದ್ಯಾರ್ಥಿಗಳಿಗೆ ಸ್ಮರಣಿಕೆ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಶೇಕ್ ಹಸನ್ ಹಾಜಿ, ಶೇಕ್ ಮುಹಮ್ಮದ್ ಯೂಸುಫ್, ಅಬೂಬಕರ್ ಅಬುಧಾಬಿ, ದ.ಕ. ಜಿಲ್ಲಾ ಸಂಚಾಲಕ ಅಬ್ದುಲ್ ಕರೀಂ ಉಳ್ಳಾಲ, ಮುಹಮ್ಮದ್ ಆದಿಲ್ ಉಪಸ್ಥಿತರಿದ್ದರು.
ಸ್ಥಾನೀಯ ಅಧ್ಯಕ್ಷ ಅಮಾನುಲ್ಲಾ ಖಾನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮೌಲಾನ ಝಾಹಿದ್ ಹುಸೇನ್ ಕಿರಾಅತ್ ಪಠಿಸಿದರು. ಹಾಫಿಝ್ ತನ್ವೀರ್ ನಾತೇ ಶರೀಫ್ ಹಾಡಿದರು. ಇಮ್ತಿಯಾಝ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







