ಹಿರಿಯ ನಾಟಕ ಕಲಾವಿದ ರಾಘವ ಬಂಗೇರ ನಿಧನ

ಮಂಗಳೂರು: ಖ್ಯಾತ ನಾಟಕ ಕಲಾವಿದರೂ, ಪಕ್ಕಲಡ್ಕ ಯುವಕ ಮಂಡಲದ ಸಕ್ರೀಯ ಸದಸ್ಯ, ಅಸೈಗೋಳಿಯಲ್ಲಿ ವಾಸವಾಗಿದ್ದ ಕೆ ರಾಘವ ಬಂಗೇರ ( 78)ರವರು ವಯೋಸಹಜ ಕಾಯಿಲೆಯಿಂದಾಗಿ ಇಂದು ಅಸೈಗೋಳಿಯಲ್ಲಿರುವ ತಮ್ಮ ಸ್ವಗ್ರಹದಲ್ಲಿ ನಿಧನ ಹೊಂದಿದರು.
ಬಜಾಲ್ ಪಕ್ಕಲಡ್ಕದ ಪರಿಸರದಲ್ಲಿ ಹುಟ್ಟಿ ಬೆಳೆದ ರಾಘವರವರು ಎಳೆಯ ಪ್ರಾಯದಲ್ಲೇ ಎಡಪಂಥೀಯ ವಿಚಾರಧಾರೆಯಿಂದ ಆಕರ್ಷಿತರಾಗಿ ಆ ಮೂಲಕ ಪಕ್ಕಲಡ್ಕ ಯುವಕ ಮಂಡಲದ ಮೂಲಕ ಸಾಂಸ್ಕೃತಿಕ ಚಟುವಟಿಕೆಯ ಕೇಂದ್ರವಾದ ಈ ಯುವಕ ಮಂಡಲದಲ್ಲಿ ತನ್ನಲ್ಲಿರುವ ಪ್ರತಿಭೆಯನ್ನು ಬೆಳೆಸಲು ಸಂಪೂರ್ಣ ವಾಗಿ ತೊಡಗಿಸಿ ಕೊಂಡ ರಾಘವರವರು ವಾರ್ಷಿಕೋತ್ಸವದ ಸಂದರ್ಭದಲ್ಲಿ ಅದೆಷ್ಟೋ ಸಾಮಾಜಿಕ ನಾಟಕಗಳನ್ನು ನಿರ್ದೇಶಿಸಿ, ನಾಟಕಗಳಲ್ಲಿ ಅನೇಕ ಹಾಡುಗಳನ್ನು ರಚಿಸಿರುತ್ತಾರೆ.ಬಳಿಕ ರಾಘವರವರು ಪ್ರಸ್ತುತ ಅಸೈಗೋಳಿಯಲ್ಲಿ ಕಳೆದ 40 ವರ್ಷಗಳಿಂದ ವಾಸವಾಗಿದ್ದಾರೆ. ಅಲ್ಲಿಯೂ ತಮ್ಮ ಸಾಂಸ್ಕೃತಿಕ ಛಾಪನ್ನು ಮೂಡಿಸಿದ ರಾಘವರವರು ಸ್ಥಳೀಯ ಅನೇಕ ಸಂಘಸಂಸ್ಥೆಗಳಲ್ಲಿ ಮಾರ್ಗದರ್ಶಕ ರಾಗಿದ್ದ, ರಾಘವ ಬಂಗೇರರವರು ಪತ್ನಿ , ಮೂವರು ಮಕ್ಕಳು, ಸೊಸೆಯಂದಿರು, ಅಳಿಯಂದಿರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.





