ಎಸ್‌ವೈಎಸ್ ವತಿಯಿಂದ ದ.ಕ. ಜಿಲ್ಲೆಯಲ್ಲಿ 'ಸೌಹಾರ್ದ ಸಂಚಾರ'

ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಕೋಮು ಸೌಹಾರ್ದವನ್ನು ಬಲಪಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು 'ಹೃದಯ ಹೃದಯಗಳನ್ನು ಬೆಸೆಯೋಣ' ಎಂಬ ಧ್ಯೇಯ ವಾಕ್ಯದೊಂದಿಗೆ ಎಲ್ಲ ಜಾತಿ ಮತಗಳ ಜನರನ್ನು ಸೇರಿಸಿ ನಡೆಸುವ 'ಸೌಹಾರ್ದ ಸಂಚಾರ'ವು ಬಶೀರ್ ಸಅದಿ ಬೆಂಗಳೂರು ಅಧ್ಯಕ್ಷತೆಯಲ್ಲಿ ದ.ಕ ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯಿತು.
ಬಪ್ಪೆನಾಡಿನಿಂದ ಮುಲ್ಕಿ ತನಕ ಸೌಹಾರ್ದ ಕಾಲ್ನಡಿಗೆ ಜಾಥಾ ನಡೆದು, ಮುಲ್ಕಿಯಲ್ಲಿ ಸಂದೇಶ ಭಾಷಣ ನಡೆಯಿತು. ರಾಜ್ಯ ಕಾರ್ಯದರ್ಶಿ ಹಮೀದ್ ಮುಸ್ಲಿಯಾರ್ ಮುಖ್ಯ ಭಾಷಣ ಮಾಡಿದರು. ಅಶ್ರಪ್ ಸಖಾಫಿ ಮಾಡಾವು, ರೆ.ಫಾ ಜೋಕಿಮ್ ಪೆರ್ನಾಂಡಿಸ್, ರೆ.ಫಾ ಪಾವಲ್ ಸಿಕ್ವೇರ, ರೆ.ಫಾ ಆ್ಯಂಟನಿ ಸೇರಾ ಮಾತನಾಡಿದರು. ಎ.ಪಿ ಅಬ್ದುಲ್ಲಾ ಮದನಿ, ಅಶ್ರಫ್ ಸಖಾಫಿ ಕನ್ನಂಗಾರ್ ಉಪಸ್ಥಿತರಿದ್ದರು.
ಅಶ್ರಫ್ ಸಖಾಫಿ ಸ್ವಾಗತಿಸಿದರು. ಅಬ್ದುರ್ರಹ್ಮಾನ್ ಹಾಜಿ ಪ್ರಿಂಟೆಕ್ ಕಾರ್ಯಕ್ರಮ ನಿರೂಪಿಸಿದರು. ಟಿ.ಕೆ ಅಬ್ದುಲ್ ಖಾದರ್ ಅದ್ದಿ ವಂದಿಸಿದರು.
ಸುರತ್ಕಲ್ ಕೇಂದ್ರ
ಗೋವಿಂದದಾಸ್ ಕಾಲೇಜು ಕಡೆಯಿಂದ ಸುರತ್ಕಲ್ ಜಂಕ್ಷನ್ ತನಕ ಕಾಲ್ನಡಿಗೆ ನಡೆದು, ಸುರತ್ಕಲ್ ಜಂಕ್ಷನ್ ನಲ್ಲಿ ಕಾರ್ಯಕ್ರಮ ನಡೆಯಿತು.
ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬೂ ಸುಫ್ಯಾನ್ ಮದನಿ ಮುಖ್ಯ ಪ್ರಭಾಷಣ ಮಾಡಿದರು. ಫಾದರ್ ಸಂತೋಷ್ ಲೋಬೋ, ಮನ್ಸೂರ್ ಅಲಿ ಕೋಟಗದ್ದೆ ಮಾತನಾಡಿದರು.
ಮೌಲಾನಾ ಅಬ್ದುರ್ರಶೀದ್ ಝೈನಿ, ಶ್ರೀ ವಿನೋದ್ ಆಚಾರ್ಯ ಹೊಸಬೆಟ್ಟು, ಫಾದರ್ ಸಂತೋಷ್ ಲೋಬೊ ಇಂಫೆನ್ಟ್ ಮೇರಿ ಚರ್ಚ್ ಕಾಟಿಪಳ್ಳ, ಶ್ರೀ ರಾಘವೇಂದ್ರ ರಾವ್, ಉದ್ಯಮಿ ಸುರತ್ಕಲ್, ಸದಾಶಿವ ಶೆಟ್ಟಿ ಇಂಟಕ್ ಅಧ್ಯಕ್ಷ, ವಿಠ್ಠಲ್ ಶೆಟ್ಟಿಗಾರ್ ಮೊದವಾದವರು ಉಪಸ್ಥಿತರಿದ್ದರು.
ಎಂ ಅಬ್ದುಲ್ ಖಯ್ಯೂಮ್ ಕಾಟಿಪಳ್ಳ ಸ್ವಾಗತಿಸಿದರು. ಮುಹಮ್ಮದ್ ಆಸಿಫ್ ಹಾಜಿ ಕೃಷ್ಣಾಪುರ ಕಾರ್ಯಕ್ರಮ ನಿರೂಪಿಸಿದರು. ಮನ್ಸೂರ್ ಅಲ ರಯ್ಯಾನ್ ಕೃಷ್ಣಾಪುರ ವಂದಿಸಿದರು.
ಮಂಗಳೂರು ಕೇಂದ್ರ
ಬಾವುಟಗುಡ್ಡೆಯಿಂದ ಕ್ಲಾಕ್ ಟವರ್ ತನಕ ಕಾಲ್ನಡಿಗೆ ಜಾಥಾ ನಡೆದು, ಮಂಗಳೂರು ಕ್ಲಾಕ್ ಟವರ್ ನಲ್ಲಿ ಸಭಣ ಕಾರ್ಯಕ್ರಮ ನಡೆಯಿತು.
ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷ ಶಾಫಿ ಸಅದಿ ಬೆಂಗಳೂರು ಮುಖ್ಯ ಪ್ರಭಾಷಣ ಮಾಡಿದರು. ಬೆಂಗಳೂರು ಈಡಿಗ ಮಠದ ವಿಖ್ಯಾತ ಸ್ವಾಮಿ, ಮಂಗಳೂರು ಚರ್ಚ್ ಪಾದರ್ ರೊಯಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಅವರು ಸೌಹಾರ್ದ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಐವನ್ ಡಿಸೋಜ, ಪದ್ಮರಾಜ್ ಆರ್ ಪೂಜಾರಿ, ನಾಸಿರ್ ಲಕ್ಕಿಸ್ಟಾರ್, ಹೈದರ್ ಪರ್ತಿಪ್ಪಾಡಿ, ಮುನೀರ್ ಕಾಟಿಪಳ್ಳ, ಹನೀಫ್ ಹಾಜಿ ಉಳ್ಳಾಲ, ಜಲೀಲ್ ಮೋಂಟುಗೋಳಿ, ಸುಹೈಲ್ ಕಂದಕ್, ಎನ್ ಎಸ್ ಕರೀಂ ಹಾಜಿ ನೆಕ್ಕರೆ, ಎಸ್ ವೈ ಎಸ್ ರಾಜ್ಯ ಉಪಾಧ್ಯಕ್ಷರುಗಳಾದ ಸೈಯದ್ ಇಲ್ಯಾಸ್ ತಂಙಳ್ ಎಮ್ಮೆಮಾಡು, ಸೈಯದ್ ಶಾಫೀ ನಈಮೀ ತಂಙಳ್ ಮಾರ್ನಹಳ್ಳಿ, ಸೈಯದ್ ಹಾಮಿಮ್ ತಂಙಳ್ ಚಿಕ್ಕಮಂಗಳೂರು, ಇಬ್ರಾಹಿಂ ಸಖಾಫಿ ಪಯೋಟ, ಇಸ್ಹಾಖ್ ಝುಹ್ರಿ ಕಾನಕೆರೆ, ಮಹ್ಬೂಬ್ ಸಖಾಫಿ ಕಿನ್ಯ, ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಅಬ್ದುರ್ರಹ್ಮಾನ್ ಹಾಜಿ ಪ್ರಿಂಟೆಕ್, ಅಶ್ರಫ್ ಎಮ್ಮೆಮಾಡು, ಅತ್ತಾವುಳ್ಳ ಮೈಸೂರು, ಇಬ್ರಾಹಿಂ ಮೂಡಿಗೆರೆ, ಸಲೀಂ ಕನ್ಯಾಡಿ, ಕಲಂದರ್ ಕಕ್ಕೆಪದವು, ಯಾಕೂಬ್ ಸಅದಿ ನಾವೂರು, ನವಾಝ್ ಸಖಾಫಿ ಅಡ್ಯಾರ್, ಫಾರೂಕ್ ಶೇಡಿಗುರಿ, ರಝಾಕ್ ಭಾರತ್, ರಶೀದ್ ಹಾಜಿ ವಗ್ಗ, ಇಬ್ರಾಹಿಂ ಸಖಾಫಿ ಸೆರ್ಕಳ ಮೊದಲಾದವರು ಉಪಸ್ಥಿತರಿದ್ದರು.
ಹನೀಫ್ ಹಾಜಿ ಉಳ್ಳಾಲ ಸ್ವಾಗತಿಸಿದರು, ಅಶ್ರಫ್ ಕಿನಾರ ಕಾರ್ಯಕ್ರಮ ನಿರೂಪಿಸಿದರು, ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ವಂದಿಸಿದರು.
ಬಿಸಿ ರೋಡ್ ಕೇಂದ್ರ
ಕೈಕಂಬದಿಂದ ಬಿಸಿರೋಡ್ ತಾಲೂಕು ಕಚೇರಿ ತನಕ ಕಾಲ್ನಡಿಗೆ ಜಾಥಾ ನಡೆದು, ಬಿಸಿರೋಡ್ ನಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ರಾಜ್ಯ ಕಾರ್ಯದರ್ಶಿ ಕೆ.ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಮುಖ್ಯ ಪ್ರಭಾಷಣ ಮಾಡಿದರು. ಅಮ್ಟೂರು ಚರ್ಚ್ ಫಾ ನವೀನ್ ಪ್ರಕಾಶ್ ಪಿಂಟೋ, ಹಸೈನಾರ್ ಅನೆಮಹಲ್, ಮಾತನಾಡಿದರು. ಎಂ.ಎಸ್ ಮಹಮ್ಮದ್, ಮುಹಿಯ್ಯದ್ದೀನ್ ಕಾಮಿಲ್ ಸಖಾಪಿ ಮೊದಲಾದವರು ಉಪಸ್ಥಿತರಿದ್ದರು.
ಅಕ್ಬರ್ ಅಲಿ ಮದನಿ ಸ್ವಾಗತಿಸಿದರು, ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಕಾರ್ಯಕ್ರಮ ನಿರೂಪಿಸಿದರು, ಇರ್ಷಾದ್ ಹಾಜಿ ಗೂಡಿನಬಳಿ ವಂದಿಸಿದರು.
ಕಲ್ಲಡ್ಕ ಕೇಂದ್ರ
ಕಲ್ಲಡ್ಕ ಕೆಸಿರೋಡ್ ನಿಂದ ಕಲ್ಲಡ್ಕ ಜಂಕ್ಷನ್ ತನಕ ಕಾಲ್ನಡಿಗೆ ಜಾಥಾ ನಡೆದು, ಕಲ್ಲಡ್ಕ ಜಂಕ್ಷನ್ ನಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಮುಖ್ಯ ಪ್ರಭಾಷಣ ಮಾಡಿದರು. ಅಮ್ಟೂರು ಚರ್ಚ್ ಫಾದರ್ ನವೀನ್ ಪ್ರಕಾಶ್ ಪಿಂಟೋ, ಸಮಾಜ ಸೇವಕ ರಾಮಣ್ಣ ಶೆಟ್ಟಿ ವಿಟ್ಲ, ಮುಹಿಯ್ಯದ್ದೀನ್ ಕಾಮಿಲ್ ಸಖಾಫಿ ತೋಕೆ, ಮಹಮ್ಮದಲಿ ಸಖಾಫಿ ಅಶ್ಅರಿಯ್ಯಾ ಮಾತನಾಡಿದರು. ಖಲೀಲ್ ಮಾಲಿಕಿ ಸ್ವಾಗತಿಸಿದರು, ಕರೀಂ ಕೆದ್ಕಾರ್ ವಂದಿಸಿದರು.







