ಮಹಿಳೆಯ ಚಿಕಿತ್ಸೆಗೆ ನೆರವಾಗಲು ಮನವಿ

ಮಂಗಳೂರು, ಜು.15: ಅಪಘಾತದಿಂದ ತಲೆಗೆ ಗಂಭೀರ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ನಿವಾಸಿ ಸುಮಿತ್ರಾ (46) ಅವರ ಚಿಕಿತ್ಸೆಗೆ ನೆರವಾಗುವಂತೆ ಅವರ ಪುತ್ರ ಶ್ರೇಯಸ್ ಕೆ.ಬಿ. ಮನವಿ ಮಾಡಿದ್ದಾರೆ.
ಜು.3ರಂದು ಕೆಲಸಕ್ಕೆಂದು ಕುಲ್ಕುಂದದಿಂದ ಮರ್ಧಾಳ ಕಡೆಗೆ ಆಟೊ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಕೈಕಂಬ ಬಳಿ ರಿಕ್ಷಾ ಪಲ್ಟಿಯಾಗಿ ಸುಮಿತ್ರಾರ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣ ಕಡಬ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಪುತ್ತೂರು ಸಿಟಿ ಆಸ್ಪತ್ರೆಗೆ ಕರೆದೊಯ್ಯಲಾ ಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಚಿಕಿತ್ಸೆಗೆ 15 ಲಕ್ಷ ರೂ.ಗೂ ಹೆಚ್ಚು ಆಗಬಹುದೆಂದು ವೈದ್ಯರು ತಿಳಿಸಿದ್ದಾರೆ. ಹಾಗಾಗಿ ನೆರವು ನೀಡುವಂತೆ ಮನವಿ ಮಾಡಿದ್ದಾರೆ.
ನೆರವು ನೀಡುವವರು ಸುಮಿತ್ರಾರ ಪುತ್ರಿ ಶ್ರೇಯಾ ಕೆ.ಬಿ. ಅವರ Bank of Baroda ಸುಬ್ರಹ್ಮಣ್ಯ ಶಾಖೆಯ ಖಾತೆಗೆ ಅಕೌಂಟ್ ನಂಬರ್: 70570100004654 IFSC: BARB0VJSUBR ಗೂಗಲ್ ಪೇ ನಂಬರ್: 9743203656 ಹಣ ಕಳುಹಿಸಬಹುದು. ಮಾಹಿತಿಗೆ ಶ್ರೇಯಸ್ (ದೂ. 9108243172) ಅವರನ್ನು ಸಂಪರ್ಕಿಸಬಹುದು.





