ಫರಂಗಿಪೇಟೆಯಲ್ಲಿ ಎಸ್.ವೈ.ಎಸ್. 'ಸೌಹಾರ್ದ ಸಂಚಾರ'

ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಕೋಮು ಸೌಹಾರ್ದವನ್ನು ಬಲಪಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ(ಎಸ್.ವೈ.ಎಸ್.)ವು 'ಹೃದಯ ಹೃದಯಗಳನ್ನು ಬೆಸೆಯೋಣ' ಎಂಬ ಧ್ಯೇಯವಾಕ್ಯದೊಂದಿಗೆ ಕುಂದಾಪುರದಿಂದ ಸುಳ್ಯದವರೆಗೆ ಹಮ್ಮಿಕೊಂಡಿರುವ 'ಸೌಹಾರ್ದ ಸಂಚಾರವು ಎಸ್.ವೈ.ಎಸ್. ರಾಜ್ಯಾಧ್ಯಕ್ಷ ಬಶೀರ್ ಸಅದಿ ಬೆಂಗಳೂರು ಅಧ್ಯಕ್ಷತೆಯಲ್ಲಿ ನಡೆಯಿತು.
ಯಾತ್ರೆಯ 2ನೇ ದಿನವಾದ ಮಂಗಳವಾರ ಸಂಜೆ ಅರ್ಕುಳದಿಂದ ಫರಂಗಿಪೇಟೆಗೆ ಕಾಲ್ನಡಿಗೆ ಜಾಥಾ ನಡೆದು ಪರಂಗಿಪೇಟೆ ಜಂಕ್ಷನ್ ನಲ್ಲಿ ಸಭಾ ಕಾರ್ಯಕ್ರಮ ಜರುಗಿತು.
ಬಶೀರ್ ಮದನಿ ಕೂಳೂರು ಮುಖ್ಯ ಭಾಷಣ ಮಾಡಿದರು. ಎಸ್ಸೆಸ್ಸೆಫ್ ನ್ಯಾಶನಲ್ ಕ್ಯಾಬಿನೆಟ್ ಸದಸ್ಯ ಮುಸ್ತಫಾ ನಈಮಿ ಹಾವೇರಿ, ಬೆಂಗಳೂರು ಈಡಿಗಾ ಮಠದ ವಿಖ್ಯಾತ ಸ್ವಾಮೀಜಿ ಭಾಷಣ ಮಾಡಿದರು.
ಎಸ್.ವೈ.ಎಸ್. ರಾಜ್ಯ ಉಪಾಧ್ಯಕ್ಷರಾದ ಸೈಯದ್ ಇಲ್ಯಾಸ್ ತಂಙಳ್ ಎಮ್ಮೆಮಾಡು, ಸೈಯದ್ ಶಾಫಿ ನಈಮಿ ತಂಙಳ್ ಮಾರ್ನಹಳ್ಳಿ, ಸೈಯದ್ ಹಾಮಿಮ್ ತಂಙಳ್ ಚಿಕ್ಕಮಗಳೂರು, ಇಬ್ರಾಹೀಂ ಸಖಾಫಿ ಪಯೋಟ, ಮಹ್ಬೂಬ್ ಸಖಾಫಿ ಕಿನ್ಯ, ಇಸ್ಮಾಯೀಲ್ ಮಾಸ್ಟರ್ ಮರಿಕ್ಕಳ, ಅಬ್ದುರ್ರಹ್ಮಾನ್ ಹಾಜಿ ಪ್ರಿಂಟೆಕ್, ಅಶ್ರಪ್ ಎಮ್ಮೆಮಾಡು, ಅಥಾವುಳ್ಳ ಮೈಸೂರು, ಇಬ್ರಾಹೀಂ ಮೂಡಿಗೆರೆ, ಸಲೀಂ ಕನ್ಯಾಡಿ, ಕಲಂದರ್ ಕಕ್ಕೆಪದವು, ಯಾಕೂಬ್ ಸಅದಿ ನಾವೂರು, ಫಾರೂಕ್ ಶೇಡಿಗುರಿ ಮೊದಲಾದವರು ಉಪಸ್ಥಿತರಿದ್ದರು.
ಎಸ್.ವೈ.ಎಸ್. ದ.ಕ ವೆಸ್ಟ್ ಅಧ್ಯಕ್ಷ ಮಹ್ಬೂಬ್ ಸಖಾಫಿ ಕಾರ್ಯಕ್ರಮ ನಿರೂಪಿಸಿದರು, ನವಾಝ್ ಸಖಾಫಿ ಅಡ್ಯಾರ್ ಸ್ವಾಗತಿಸಿದರು, ತೌಸೀಫ್ ಸಅದಿ ವಂದಿಸಿದರು.







