ಬಿ.ಸಿ.ರೋಡ್: ಎಸ್.ವೈ.ಎಸ್. 'ಸೌಹಾರ್ದ ಸಂಚಾರ'

ಬಿ.ಸಿ.ರೋಡ್: ಕರಾವಳಿ ಕರ್ನಾಟಕದಲ್ಲಿ ಕೋಮು ಸೌಹಾರ್ದವನ್ನು ಬಲಪಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ(ಎಸ್.ವೈ.ಎಸ್.)ವು 'ಹೃದಯ ಹೃದಯಗಳನ್ನು ಬೆಸೆಯೋಣ' ಎಂಬ ಧ್ಯೇಯವಾಕ್ಯದೊಂದಿಗೆ ಹಮ್ಮಿಕೊಂಡಿರುವ 'ಸೌಹಾರ್ದ ಸಂಚಾರ'ವು ಮಂಗಳವಾರ ಸಂಜೆ ಬಿ.ಸಿ.ರೋಡ್ ನಡೆಯಿತು.
ಎಸ್.ವೈ.ಎಸ್. ರಾಜ್ಯಾಧ್ಯಕ್ಷ ಬಶೀರ್ ಸಅದಿ ಬೆಂಗಳೂರು ಅಧ್ಯಕ್ಷತೆಯಲ್ಲಿ ಕೈಕಂಬದಿಂದ ಬಿ.ಸಿ. ರೋಡ್ ತಾಲೂಕು ಕಚೇರಿ ತನಕ ಕಾಲ್ನಡಿಗೆ ಜಾಥಾ ನಡೆಯಿತು. ಬಳಿಕ ಬಿ.ಸಿ.ರೋಡ್ ನಲ್ಲಿ ಸಭಾ ಕಾರ್ಯಕ್ರಮ ಜರುಗಿತು.
ರಾಜ್ಯ ಕಾರ್ಯದರ್ಶಿ ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಮುಖ್ಯ ಭಾಷಣ ಮಾಡಿದರು. ಅಮ್ಟೂರು ಚರ್ಚ್ ಧರ್ಮಗುರು ಫಾ.ನವೀನ್ ಪ್ರಕಾಶ್ ಪಿಂಟೋ, ಹಸೈನಾರ್ ಅನೆಮಹಲ್, ಮಾತನಾಡಿದರು.
ಎಂ.ಎಸ್.ಮಹಮ್ಮದ್, ಮುಹಿಯುದ್ದೀನ್ ಕಾಮಿಲ್ ಸಖಾಪಿ ಮೊದಲಾದವರು ಉಪಸ್ಥಿತರಿದ್ದರು.
ಅಕ್ಬರ್ ಅಲಿ ಮದನಿ ಸ್ವಾಗತಿಸಿದರು, ಇಸ್ಮಾಯೀಲ್ ಮಾಸ್ಟರ್ ಮರಿಕ್ಕಳ ಕಾರ್ಯಕ್ರಮ ನಿರೂಪಿಸಿದರು. ಇರ್ಷಾದ್ ಹಾಜಿ ಗೂಡಿನಬಳಿ ವಂದಿಸಿದರು.
Next Story







