ವಿಕಲಚೇತನರಿಗೆ ಗ್ರಾಮೀಣ ಪುನರ್ವಸತಿ ಕಾರ್ಯಕತೆರ್ಯರ ಹುದ್ದೆ: ಅರ್ಜಿ ಆಹ್ವಾನ

ಮಂಗಳೂರು: ಪ್ರಸಕ್ತ (2025-26ನೇ) ಸಾಲಿನಲ್ಲಿ ಮಂಗಳೂರು, ಉಳ್ಳಾಲ, ಮೂಡಬಿದಿರೆ ತಾಲೂಕಿನ ಗ್ರಾಪಂಗಳಲ್ಲಿ ಖಾಲಿ ಇರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಗ್ರಾಪಂಗೆ ಒಬ್ಬರಂತೆ ಎಸೆಸ್ಸೆಲ್ಸಿ ಯಲ್ಲಿ ಪಾಸ್/ಫೇಲ್ ಆದ ವಿಕಲಚೇತನರನ್ನು ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯರ ನೇಮಕ ಮಾಡಲು ಅವಕಾಶವಿದೆ. 18ರಿಂದ 45 ವರ್ಷ ಪ್ರಾಯದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾಸಿಕ ಗೌರವಧನ 10 ಸಾವಿರ ರೂ.ನೀಡಲಾಗುತ್ತದೆ.
ಮಂಗಳೂರು ತಾಲೂಕಿನ ಉಳಾಯಿಬೆಟ್ಟು ಗ್ರಾಪಂ, ಮೂಡುಬಿದಿರೆ ತಾಲೂಕಿನ ಪುತ್ತಿಗೆ ಗ್ರಾಪಂ, ಉಳ್ಳಾಲ ತಾಲೂಕಿನ ಅಂಬ್ಲಮೊಗರು, ಬೊಳಿಯಾರ್ ಗ್ರಾಪಂಗಳಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯರ ಹುದ್ದೆ ಖಾಲಿ ಇದೆ. ಆಸಕ್ತ ವಿಕಲಚೇತನರು ಆ.12ರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆಯನ್ನು ಮಂಗಳೂರು ಉರ್ವ ಮಾರ್ಕೆಟ್ ಬಿಲ್ಡಿಂಗ್‌ನ 3ನೇ ಮಹಡಿಯಲ್ಲಿರುವ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ಕಚೇರಿಯಿಂದ ಪಡೆದು ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ಮಂಗಳೂರು ತಾಪಂ ಎಂಆರ್‌ಡಬ್ಲ್ಯು ಜಯಪ್ರಕಾಶ್ (ಮೊ.ಸಂ:9110897458)ರನ್ನು ಸಂಪರ್ಕಿಸಬಹುದು ಎಂದು ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







